ಎಂ.ಎನ್.ಸುರೇಶ್ ನಿರ್ಮಿಸುತ್ತಿರುವ “ದೇವಿ ತುಳಜಾ ಭವಾನಿ” ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಅನ್ನೋ ಸುದ್ದಿಗಳು ಕೇಳಿ ಬರ್ತಿವೆ.. ಕನ್ನಡದ ಬಚ್ಚನ್ ಸಿನೆಮಾಗಾಗಿ ನಯನತಾರಾನ ಕರೆದ್ರೆ ಅವರು ಬರಲಿಲ್ಲ.. ಹೀಗಾಗಿ ನಮ್ ಮನೆ ಬಿಟ್ಟು ಹೋಗಿರೋ ಹೆಣ್ ಐಕಳನ್ನು ವಾಪಸ್ ಕರಿಯೋಣ ನಡೀರಯ್ಯಾ ಈ ಬೇರೆ ಊರಿನ ಹೆಣ್ ಐಕಳು ನಮ್ ಮಾತು ಕೇಳಲ್ಲ ಅಂತ ನಿರ್ಮಾಪಕರೊಬ್ಬರು ಹೇಳಿದ್ರಂತೆ.. ಹೀಗಾಗಿ ಬೇರೇ ಭಾಷೆಗೆ ಹೋಗಿರೋ ನಮ್ಮ ಕನ್ನಡದ ಹುಡುಗಿಯರನ್ನು ಮತ್ತೆ ಕನ್ನಡಕ್ಕೆ ಕರೆ ತರಬೇಕು ಅಂತ ನಿರ್ಮಾಪಕರೆಲ್ಲರೂ ಸೇರಿ ಇಂಥಾ ಪ್ಲಾನ್ ಮಾಡಿದ್ದಾರಂತ ಗಾಂಧೀನಗರದ ಜನ ಮಾತಾಡಿಕೊಳ್ತಿದ್ದಾರೆ,. ಇದರ ಮೊದಲನೆಯ ಹೆಜ್ಜೇನೇ ಅನುಷ್ಟಕಾರನ್ನು ಕನ್ನಡಕ್ಕೆ ಕರೆತರೋ ಪ್ರಯತ್ನ ನಡೀತಿದೆ.. ಇತ್ತೀಚಿನ ಹೇಳಿಕೆಯೊಂದರಲ್ಲಿ "ಒಳ್ಳೇ ಆಫರ‍್ ಬಂದ್ರೆ ನಾನು ಕನ್ನಡ ಸಿನೆಮಾದಲ್ಲಿ ಮಾಡ್ತೀನಿ ಅಂತ ಅನುಷ್ಕಾ ಶೆಟ್ಟಿ ಹೇಳಿದ್ರು. ಹೀಗಾಗಿ ಆ ಮಾತನ್ನು ನಂಬಿದ ನಮ್ ನಿರ್ಮಾಪಕರು ಅನುಷ್ಕಾ ಹಿಂದೆ ಬಿದ್ದಿದ್ದಾರೆ.. ಆದ್ರೆ ಅನುಷ್ಕಾ ಈ ಆಫರ್ ಅನ್ನು ಒಪ್ಪಿಕೊಳ್ತಾರಾ ಕನ್ನಡಕ್ಕೆ ವಾಪಾಸ್ ಬರ್ತಾರ ಅನ್ನೋದೇ ಸದ್ಯದ ಪ್ರೆಶ್ನೆ.Share This Article To your Friends
ನಯನತಾರಾ ಮೇಲೆ ಕನ್ನಡ ನಿರ್ಮಾಪಕರು ಸಿಟ್ಟು..!!
ಎಂ.ಎನ್.ಸುರೇಶ್ ನಿರ್ಮಿಸುತ್ತಿರುವ “ದೇವಿ ತುಳಜಾ ಭವಾನಿ” ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಅನ್ನೋ ಸುದ್ದಿಗಳು ಕೇಳಿ ಬರ್ತಿವೆ.. ಕನ್ನಡದ ಬಚ್ಚನ್ ಸಿನೆಮಾಗಾಗಿ ನಯನತಾರಾನ ಕರೆದ್ರೆ ಅವರು ಬರಲಿಲ್ಲ.. ಹೀಗಾಗಿ ನಮ್ ಮನೆ ಬಿಟ್ಟು ಹೋಗಿರೋ ಹೆಣ್ ಐಕಳನ್ನು ವಾಪಸ್ ಕರಿಯೋಣ ನಡೀರಯ್ಯಾ ಈ ಬೇರೆ ಊರಿನ ಹೆಣ್ ಐಕಳು ನಮ್ ಮಾತು ಕೇಳಲ್ಲ ಅಂತ ನಿರ್ಮಾಪಕರೊಬ್ಬರು ಹೇಳಿದ್ರಂತೆ.. ಹೀಗಾಗಿ ಬೇರೇ ಭಾಷೆಗೆ ಹೋಗಿರೋ ನಮ್ಮ ಕನ್ನಡದ ಹುಡುಗಿಯರನ್ನು ಮತ್ತೆ ಕನ್ನಡಕ್ಕೆ ಕರೆ ತರಬೇಕು ಅಂತ ನಿರ್ಮಾಪಕರೆಲ್ಲರೂ ಸೇರಿ ಇಂಥಾ ಪ್ಲಾನ್ ಮಾಡಿದ್ದಾರಂತ ಗಾಂಧೀನಗರದ ಜನ ಮಾತಾಡಿಕೊಳ್ತಿದ್ದಾರೆ,. ಇದರ ಮೊದಲನೆಯ ಹೆಜ್ಜೇನೇ ಅನುಷ್ಟಕಾರನ್ನು ಕನ್ನಡಕ್ಕೆ ಕರೆತರೋ ಪ್ರಯತ್ನ ನಡೀತಿದೆ.. ಇತ್ತೀಚಿನ ಹೇಳಿಕೆಯೊಂದರಲ್ಲಿ "ಒಳ್ಳೇ ಆಫರ‍್ ಬಂದ್ರೆ ನಾನು ಕನ್ನಡ ಸಿನೆಮಾದಲ್ಲಿ ಮಾಡ್ತೀನಿ ಅಂತ ಅನುಷ್ಕಾ ಶೆಟ್ಟಿ ಹೇಳಿದ್ರು. ಹೀಗಾಗಿ ಆ ಮಾತನ್ನು ನಂಬಿದ ನಮ್ ನಿರ್ಮಾಪಕರು ಅನುಷ್ಕಾ ಹಿಂದೆ ಬಿದ್ದಿದ್ದಾರೆ.. ಆದ್ರೆ ಅನುಷ್ಕಾ ಈ ಆಫರ್ ಅನ್ನು ಒಪ್ಪಿಕೊಳ್ತಾರಾ ಕನ್ನಡಕ್ಕೆ ವಾಪಾಸ್ ಬರ್ತಾರ ಅನ್ನೋದೇ ಸದ್ಯದ ಪ್ರೆಶ್ನೆ.
Tags
ಸಿನೆಮಾ
