Share This Article To your Friends

ನಡುರಸ್ತೆಯಲ್ಲೇ ನಡೀತು ಭೀಕರ ಘಟನೆ. ಮೊಬೈಲ್ ನಲ್ಲಿ ಎದೆ ನಡುಗಿಸುವ ದೃಶ್ಯ


ನಡುರಸ್ತೆಯಲ್ಲೇ ನಡೀತು ಭೀಕರ ಘಟನೆ.
ಮೊಬೈಲ್ ನಲ್ಲಿ ಎದೆ ನಡುಗಿಸುವ ದೃಶ್ಯ


ಕಪ್ಪು ಬಣ್ಣದ ಉಡುಪು ಧರಿಸಿದ ವ್ಯಕ್ತಿಯೊಬ್ಬ 10 ಇಂಚು ಡ್ರ್ಯಾಗರ್ ಹಿಡಿದು ಕಾರಿನಲ್ಲಿದ್ದವರ ಕೊಲೆಗೆ ಯತ್ನಿಸುತ್ತಿರುವ ದೃಶ್ಯ ಮೊಬೈಲ್ ಒಂದರಲ್ಲಿ ಸೆರೆಯಾಗಿದ್ದು, ಈ ದೃಶ್ಯ ನೋಡುಗರನ್ನೇ ಬೆಚ್ಚಿ ಬೀಳಿಸುತ್ತಿದೆ.

(ವಿಡಿಯೋ ಇದೆ ನೋಡಿ)



ಲಂಡನ್ ರೋಡ್ ಒಂದರಲ್ಲಿ ವ್ಯಕ್ತಿಯೊಬ್ಬ ಸೈಕಲ್ ನಲ್ಲಿ ಬರ್ತಾ ಇದ್ದ. ಹಿಂದಿನಿಂದ ಬಂದ ಕಾರ್ ಸೈಕಲ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಆಕ್ರೋಷಗೊಂಡ ಸೈಕಲ್ ಸವಾರ, ತನ್ನಲ್ಲಿದ್ದ 10 ಇಂಚಿನ ಭಯಂಕರವಾದ ಡ್ರ್ಯಾಗರ್ ನಿಂದ ಕಾರಿನಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಹಿಂದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದನ್ನು ಕಂಡ ಸೈಕಲ್ ಸವಾರ, ಸೀದಾ ತನ್ನಲ್ಲಿದ್ದ ಡ್ರ್ಯಾಗರ್ ನಿಂದ ಕಿಟಕಿಯನ್ನು ಒಡೆದು ಒಳಗಿದ್ದವರಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸುತ್ತಾನೆ. ಆದ್ರೆ ಅದು ಸಾಧ್ಯವಾಗುವುದಿಲ್ಲ. ಅಷ್ಟ್ರಲ್ಲೇ ಜನ ಜಮಾವಣೆಗೊಳ್ಳುತ್ತಿರುವುದನ್ನು ಕಂಡ ಸೈಕಲ್ ಸವಾರ ಅಲ್ಲಿಂದ ಎಸ್ಕೇಪ್ ಆಗ್ತಾನೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಸೈಕಲ್ ಸವಾರನನ್ನು ಹುಡುಕುತ್ತಿದ್ದು, ನಡು ರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ರಾಜಾರೋಷವಾಗಿ ಹಲ್ಲೆಗೆ ಯತ್ನಿಸುತ್ತಿರುವ ದೃಶ್ಯ ಲಂಡನ್ ಜನರನ್ನು ಬೆಚ್ಚಿ ಬೀಳಿಸುತ್ತಿದೆ.

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved