Share This Article To your Friends

ಸಿಹಿ ನೋವು..!! ಪ್ರೀತಿಯ ಫಲ


                                                                              ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??
ನಿನ್ನನೆ ಮೆಚ್ಚಿದ ನನ್ನ.. ಮನಸಲ್ಲೇ ಕೊಂದಿಹೆಯಾ..??
ನನ್ನಲಿ ಪ್ರೀತಿಯ ಬೆಳೆಸಿ... ನೀ ಕಣ್ಮರೆಯಾಗಿಹೆಯಾ.?
ನಿನನ್ಲಿ ಇರುವ ನನ್ನ ನೆನಪನ್ನು ಅಳಿಸಿದೆಯಾ..??

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??

ಹೇಳದೇ ನೀ ಕೇಳದೇ ಈ ಹೃದಯವ ನೀ ದೋಚಿದೆ..
ಆಸರೆ ನೀನಾಗುವೆ ಅಂದುಕೊಂಡೆ ನಾ ಬದುಕಿದೆ..

ಕಾರಣವ ಹೇಳಿ ಹೋಗು.. ಯಾಕೆ ಹಿಂಗೆ ನೀ ಕಾಡಿದೆ..
ಪ್ರೀತೀನ ಮಾಡಿ ಈಗ  ದೂರ ಯಾಕೆ ತಳ್ಳಿದೆ..??

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??







ನೀನಿಲ್ಲದೇ ಬದುಕಲಾರೆನು.. ಅಂತ ಆಗ ನೀ ಕೊರಗಿದೆ..
ನಿನ್ನ ನೋಡದೆ ಮಾತಾಡದೇ ಇರಲಾಗದು ಅಂತ ಅತ್ತಿದ್ದೆ.

ಏನೆಂದು ಹೇಳಲಿ  ಗೆಳತಿ... ನಿನ್ನ ನೆನಪು  ಕಾಡುತಿದೆ
ಯಾಕ್ ಹಿಂಗೆ ಸಾಯಿಸುತಿರುವೆ ..?? ನನ್ನ ನೋವು ಕಾಣದೆ..??

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??

ನನ್ನ ನಗುವನು ಮರಳಿ  ಕೊಡುವೆಯಾ..?? ನನ್ನ ಕೊನೆಯ ಪ್ರೆಶ್ನೆ ಇದು ಉತ್ತರಿಸು..
ನಾನ್ ನೀಡಿದ ಆ ಪ್ರೀತಿಗೆ ನೀನ್ ಕೊಟ್ಟ ಬೆಲೆ ಏನು ಯೋಚಿಸು..!!

ನಿನ್ನನ್ನು ನಾನ್  ದೂರೋ ದಿಲ್ಲ.. ತಪ್ಪು ಮಾಡಿದ್ರೆ ನನ್ ಕ್ಷಮಿಸು..
ಅವಳಿಲ್ಲದೇ ಬದುಕಲಾರೆನು.. ಓ ದೇವ್ರೆ ಈ ಪ್ರಾಣ ನೀ ಸ್ವೀಕರಿಸು..!!

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??



ನಿಮ್ಮ
ಸವಿ ನೆನಪಿನ
ಶೇಖ್(ಸ್ಪಿಯ)ರ‍್
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved