Share This Article To your Friends

ಕಹಿ ಸತ್ಯ.!!

ಕೋರಸ್!! ಹಾಳಾಗ್ ಹೋದೇ..!! ಹಾಳಾಗ್ ಹೋದೇ..!! ಹಾಳಾಗ್ ಹೋದೇ..!! ಹಾಳಾಗ್ ಹೋದೇ..!!


ರಾಜ ವಿಸ್ಕಿ ಓಲ್ಡು ಮಂಕು ದೋಸ್ತಯಾಯ್ತು ನಂಗೆ..!!
ಪಾಪಿ ದುನಿಯಾ ಬ್ಯಾಡ ಅಂತ ದೂರ ಇಟ್ತು ಹಿಂಗೆ..!!
ಸತ್ಯ ಶಾಂತಿ ಅಂತ ಇದ್ರೆ ಮುಕ್ತಿ ಇಲ್ವೋ ಮಂಗೆ..!!
ಬಾರಿನೊಳಗೆ ಇಹಳು ಸತ್ಯ ದಾರಿ ತೋರೊ ಗಂಗೆ..!!


ಸಿಹಿಯ ಸುಳ್ಳು ಸಾಹುಕಾರನ ನಾಲಿಗೆ..!!
ಕಹಿಯ ಸತ್ಯ ಕುಡುಕ ಬಡವನ ಪಾಲಿಗೆ..!!


ಸತ್ಯ ಮಾರ್ಗದಲ್ಲಿ ನನ್ನ ನಡಿ ಅಂತ ಅಂದ್ರು..
ಸುಳ್ಳಿನರಮನೇಲ್ ಗುರು ಸುಖವ ಕಂಡು ಕೊಂಡ್ರು.!
ಸತ್ಯ ಹೇಳಿದ್ದಕ್ಕೆ ನನ್ನ ಕುಡುಕ ಅಂತ ಅಂದ್ರು..!
ಕುಡಿದ ಸತ್ಯವನ್ನು ಮಹಾ ಜ್ಞಾನಿ ತಿಳೊದುಕೊಂಡ್ರು..!!


ಗುರುವು ಹೇಳಿಕೊಟ್ಟ ಸತ್ಯ..!!
ಪಾಲನೆಗೆ ಮಾತ್ರ ಮಿಥ್ಯ..!!

ಸತ್ಯಕ್ಕಾಗಿ ಹರಿಶ್ಚಂದ್ರ  ಮನೆ ಮಠ ಬಿಟ್ಟ..!!
ಶಾಕುಂತಲೆ ಸುಳ್ಳಿನಿಂದ ವಿಶ್ವಾಮಿತ್ರ ಕೆಟ್ಟ..
ಗೆಲ್ಲೋತನಕ ಪಾಂಡವ್ರಿಗೆ ಕೃಷ್ಣ ಕೈ ಕೊಟ್ಟ..
ಗೆದ್ದ ಮೇಲೆ ಮಾತು ತಪ್ಪಿ ಅವರ ಕೈ ಬಿಟ್ಟ..!!


ತಿಳಿದು ತಿಳಿದು ಸತ್ಯ ಸತ್ಯ ಅಂದೆ.
ಹುಚ್ಚನಾಗಿ ಬೆಂಕಿಯಲ್ಲಿ ಬೆಂದೆ..!!


ಸ್ವತಂತ್ರ ತಂದು ಕೊಟ್ಟ ಗಾಂಧಿಯನ್ನೇ ಕೊಂದರಿಲ್ಲಿ
ಪೂಜೆ ಮಾಡುವಂಥ ದೇವರಾದ ಗೋಡ್ಸೆ ಇಲ್ಲಿ..
ಕೋಟಿ ಕೋಟಿ ಕೊಳ್ಳೆ ಹೊಡೆಯೋ ರಾಜಕೀಯದಲ್ಲಿ..!!
ಆತ್ಮ ಹತ್ಯೆ ಮಾಡಿಕೊಂಡ ರೈತನು ಹೊಲದಲ್ಲಿ..!!

ಪಾಪ ಪುಣ್ಯಕ್ಕಿಲ್ಲಿ ಬೆಲೆಯೆ ಇಲ್ಲ..
ದೇವರಿಗೂ ದಿಕ್ಕು ತಪ್ಪಿತಲ್ಲಾ..!!

ಹಾಳಾಗ್ ಹೋದೇ..!!!

ಶೇಖ್(ಸ್ಪಿಯ)ರ‍್
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved