Share This Article To your Friends

ಭಟ್ಟರ ಸಿನೆಮಾ ದಲ್ಲಿ ಹೀರೋಯಿನ್ ಗಳ "ಡ್ರಾಮಾ"


“ಡ್ರಾಮಾ” ದಲ್ಲಿ ನಟನಾಗಿ ಯಶ್  ಅಭಿನಯಿಸ್ತಾ ಇದ್ದಾರೆ,.. ಆದ್ರೆ ವಿಷ್ಯ ಇದಲ್ಲ
ಯೋಗರಾಜ ಭಟ್ರು”ಡ್ರಾಮಾ” ಮಾಡೋಕೆ ಅದ್ಯಾವ ಕಾಲದಲ್ಲಿ ಶುರು ಮಾಡಿದ್ರೋ ಗೊತ್ತಿಲ್ಲ..  ಸಿನೆಮಾಗೆ ನಟೀ ಮಣಿ ವಿಷಯದಲ್ಲಿ ಬಹಳಷ್ಟು ಅಡೆತಡೆಗಳು ಆಗ್ತಿವೆ.. ಈ ಮೊದಲು ಭಾವನ ಬುಕ್ ಆಗಿದ್ರು.. ನಂತರ ರಾಧಿಕಾ ಪಂಡಿತ್ ಬಂದ್ರು..  ಆದ್ರೆ ಎರಡನೆಯ ನಟಿಯಾಗಿ ಶುಭಾ ಫುತೇಲಾ ಬಂದ್ರು ಆದ್ರೆ ಅವರ ಅಪ್ಪ “ಕನ್ನಡ ಸಿನೆಮಾದಲ್ಲಿ ಮಾಡಬೇಡ ಅಂತ ಹೇಳಿದ್ರಂತೆ.. ಹೀಗಾಗಿ ಡ್ರಾಮಾದಿಂದ ಓಡಿ ಹೋದ ಶುಭಾ ಜಾಗಕ್ಕೆ ಸಿಂಧು ಲೋಕನಾಥ್ ಬಂದಿದ್ದಾರೆ.. ಲೈಫು ಇಷ್ಟೇನೆ ಚಿತ್ರದಲ್ಲಿ ದಿಗಂತ್ ಜೊತೆ ನಟಿಸಿದ್ದ ಸಿಂಧು ಯೋಗರಾಜರ ಢ್ರಾಮಾದಲ್ಲಿ ನಟಿಸ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ..  ಮೂಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಿರೋ ಸಿಂಧು ಕಡೇವರೆಗೂ ಸಿನೆಮಾದಲ್ಲಿ ಉಳೀತಾರಾ ಅಥವಾ ಮತ್ತೇನಾದ್ರೂ ಡ್ರಾಮಾ ಮಾಡ್ತಾರಾ ಆಂತ ಯೋಗರಾಜರು ಯೋಚಿಸ್ತಾ ಇದ್ದಾರೆ.. ಒಟ್ನಲ್ಲಿ  ಯೋಗರಾಜರ ಡ್ರಾಮಾ ಚಿತ್ರದಲ್ಲಿ ಎಲ್ಲರೂ ಡ್ರಾಮಾ ಮಾಡ್ತಿದ್ದಾರೆ ಅಂತ ಭಟ್ರು ಫೀಲಿಂಗ್ ನಲ್ಲಿದ್ದಾರೆ..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved