Share This Article To your Friends

ಗಾಡ್ ಫಾದರ್ ಬಂದ


ಕನ್ನಡದ ರಿಯಲ್ ಸ್ಟಾರ, ಸೂಪರ‍್ ಸ್ಟಾರ‍್  ಉಪೇಂದ್ರ  ರವರ ಬಹು ನಿರೀಕ್ಷಿತ ಸಿನೆಮಾ ಗಾಡ್ ಫಾದರ‍್ ಮುಂದಿನ ವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ..  ಇದು ತಮಿಳು ಚಿತ್ರದ ರೀಮೇಕ್ ಅಂತಲೂ ಕೂಡ ಹೇಳಲಾಗ್ತಿದೆ.. ಸೇತು ಶ್ರೀ ರಾಮ್ ಈ ಗಾಡ್ ಫಾದರ‍್ ಸಿಎನಮಾವನ್ನು ನಿರ್ದೇಶಿಸಿದ್ದಾರೆ.. ಮತ್ತು ಗಂಡು ಗಲಿ ಕೆ.ಮಂಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.. ಸುಮಾರು 12 ಕೋಟಿ ಬಂಡವಾಳದಲ್ಲಿ ನಿರ್ಮಾಣವಾದ ಭಾರೀ ಬಜೆಟ್ ಸಿನೆಮಾ ಅನ್ನೋ ಖ್ಯಾತಿಗೆ ಗಾಡ್ ಫಾದರ‍್ ಚಿತ್ರ ಪಾತ್ರವಾಗಿದೆ.. ಇನ್ನು ಈ ಸಿನೆಮಾದಲ್ಲಿ ಉಪ್ಪಿಗೆ ಜೊತೆಯಾಗಿರೋದು ಮೋಹಿನಿ ಖ್ಯಾತಿಯ ಸದಾ ಮತ್ತು ಸೌಂದರ್ಯ ಜಯಮಾಲಾ.. ಈ ಗಾಡ್ ಫಾದರ‍್ ಸಿನೆಮಾದ ಮತ್ತೊಂದು ವಿಶೇಷತೆ ಅಂದ್ರೆ ಆಸ್ಕರ‍್ ಪ್ರಶಸ್ತಿ ವಿಜೇತ “ಎ.ಆರ‍್ ರೆಹಮಾನ್” ಸಂಗೀತ ಈ ಸಿನೆಮಾಗೆ ಇದೆ.  ಎ.ಆರ‍್ ರೆಹಮಾನ್ ಸಂಗೀತ ನೀಡಿದ್ದಾರೆ ಅಂದ್ರೆ ಹಾಡುಗಳು ಹೇಗೆ ಇರುತ್ತೆ ಅಂತ ನೀವು ಈಗಾಗಲೇ ಊಹಿಸಿರಬಹುದು.. ಅಷ್ಟೇ ಅಲ್ಲಾ ಭೂಮಿಕಾ ಚಾವ್ಲಾ ಕೂಡಾ ಒಂದು ವಿಶೇಷ ಪಾತ್ರದಲ್ಲಿ ಬಂದು ಹೋಗಲಿದ್ದಾರೆ.. ಸುಂದರ ಹಾಡುಗಳು, ಅತ್ಯುತ್ತಮ ಕಥೆ ಮತ್ತು ರಿಚ್ ಆಗಿ ನಿರ್ಮಾಣವಾದ ಈ ಗಾಡ್ ಫಾದರ‍್ ಬಿಡುಗಡೆಗೆ ಸಿದ್ದವಾಗಿದೆ. ಅದ್ರೆ ಉಪೇಂದ್ರ ಅಭಿನಯದ ಮತ್ತೊಂದು ಚಿತ್ರ ಕಠಾರಿ ವೀರ ಸುರ ಸುಂದರಾಂಗಿ” ಸಿನೆಮಾ ಕೂಡ ಬಿಡುಗಡೆಗೆ ಸಿದ್ದವಾಗಿದ್ದು ಈ ಎರಡೂ ಸಿನೆಮಾಗಳ ಬಿಡುಗಡೆಯಲ್ಲಿ ವಿವಾದಗಳಾಗಿವೆ.. ವಿವಾದ ಬಗೆಹರಿದರೆ ಗಾಡ್ ಫಾದರ‍್ ಮುಂದಿನವಾರ ತೆರೆಗೆ ಬರ್ತಾಇದ್ದಾರೆ.. ನೋಡಿ ಎಂಜಾಯ್ ಮಾಡಿ..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved