Share This Article To your Friends

ಕಾಯ್ತಿರ‍್ತೀನಿ ನಿಂಗೆ... ಹೋಗೋವರ‍್ಗೂ ಮಣ್ಣಿಗೆ..!!

ಹೆಂಗೆ ಹೇಳ್ಲಿ ನನ್ನ ಹುಡ್ಗಿ ನಿದ್ದೆ ಇಲ್ಲ ನಂಗೆ... 
ನಿನ್ನ ನೆನಪಲ್ ಕೊರಗಿ ಕೊರಗಿ ಆಗ್ತಿದ್ದೀನಿ ಸಣ್ಗೆ..!!
ನಿದ್ದೆ ಮಾಡಿ ಎಷ್ಟೋ ದಿನ ಅಗ್‌ಬುಟ್ತಮ್ಮ ಕಣ್ಗೆ..!!
ನಿದ್ದೆ ಮಾಡೋಕ್ ಹೋದ್ರೆ ಸಾಕು ಮನಸಲ್ ನಿಂದೆ ಗುಂಗೆ..!!


ಫಳ್ ಫಳಾಂತ ನಿನ್ನ ಮುಖ ನಂಗೆ ಬೆಳಕಿದ್ದಂಗೆ..
ಸೂರ್ಯನ್ ಬಿಸ್ಲು ಜಾಸ್ತಿ ಆಗಿ ಸುಟ್ಟೋಯ್ತಪ್ಪ ಕರ‍್ಗೆ.!! 
ಎದ್ಯಾ ಒಳ್ಗೆ ನೋವು ಐತೆ ಯಾರ‍್ಗೂ ಕಾಣದಂಗೆ..
ನಗ್ತಾ ದೂರ ಹೋದೇ ನೀನು ಏನೂ ಹೇಳದಂಗೆ.. ಒಸಿ.. ಮಾತಾನಾಡದಂಗೆ..!!


ಮೂಲೇ ಮನೆ ಮಾದೇವೀನೂ ಲವ್ ಯೂ ಅಂದ್ಳು ನಂಗೆ..!!
ಕಮಲ ಯಾಕೋ ಕಣ್ ಹೊಡದಿದ್ಳು ನಂಗೇ ತಿಳಿಯದಂಗೆ..
ರಮ್ಯಾ, ಭವ್ಯಾ, ಕಾವ್ಯ ನವ್ಯ, ಕೊಟ್ರು ಲೆಟ್ರು ನಂಗೆ..!!
ಬರಿಯೋಕ್ ಬರ‍್ದೇ ಇದ್ರೂ, ಬರ‍್ದೆ ಲವ್ವು ಲೆಟ್ರು ನಿಂಗೆ..


ಪ್ರೀತಿ ಅಂದ್ರೆ ಅಂದ್ಕೊಂಡಿದ್ದೆ ಪಾಪ ತೊಳಿಯೋ ಗಂಗೆ..
ಪ್ರೀತಿ ಮಾಡಿ ಕೈಯ್ಯಿ ಕೊಟ್ಬು, ಮಾಡ್ಬುಟ್ ಹೋದೆ ದಂಗೆ..!!
ಮನಸು ಯಾಕೋ ಕುಣೀತೈತೆ ಹುಚ್ಚು ಕೋತಿಯಂಗೆ.. 
ನಿನ್ನನ್ ಬಿಟ್ಟು ಬದುಕೋದ್ ಮಾತ್ರ ಗೊತ್ತಿಲ್ಲಮ್ಮ ನಂಗೆ..



ಎಷ್ಟೇ ವರ್ಷ ಕಳೀತೀರ‍್ಲಿ ಕಾಯ್ತಿರ‍್ತೀನಿ ನಿಂಗೆ..
ಕೊರಗಿದ್ರೂನೂ, ಸೊರಗಿದ್ರೂನೂ ಬದುಕಿರ‍್ತೀನಿ ಹಿಂಗೆ..!!
ಗಂಡನ್ ಮನೆ ದ್ವಾವ್ರು ಮನೆ ಇದ್ದಂಗಮ್ಮ ಹೆಣ್ಗೆ.. 
ಆ ಮನೇಲ್ ನಾನು ಕಾಯ್ತಿರ‍್ತೀನಿ ಹೋಗೋವರ‍್ಗೂ ಮಣ್ಗೆ..!!.. ದೇಹ ಸೇರೋವರ‍್ಗೂ ಮಣ್ಗೆ..

Shek(spe)ar
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved