Share This Article To your Friends

ನಾವು ಭಾರತೀಯರೆಂದು ಹೆಮ್ಮೆ ಪಡೋಣ..!!

ನಾವು ಭಾರತೀಯರೆಂದು ಹೆಮ್ಮೆ ಪಡೋಣ..

೧. ತುತ್ತು ಅನ್ನಕ್ಕೂ ಪರದಾಡುತ್ತಿದ್ದರೂ, ಅವರಿಂದ ಹಣ ಕಿತ್ತುಕೊಂಡು, ಕಕ್ಕ ಮಾಡುವ ರೂಮಿಗೆ ಲಕ್ಷ ಲಕ್ಷ ಸುರಿದಿರುವುದಕ್ಕೆ
೨. ಪೆಟ್ರೋಲ್ ಗೆ ಅತಿ ಹೆಚ್ಚು ಬೆಲೆ ನೀಡಿ ಕೊಂಡುಕೊಳ್ಳುತ್ತಿರುವುದಕ್ಕೆ
೩. ಅತಿ ಹೆಚ್ಚು ಟ್ಯಾಕ್ಸ್ ಕಟ್ಟಿ ರಾಜಕಾರಣಿಗಳ ಹೊಟ್ಟೆ ತುಂಬಿಸ್ತಾ ಇರುವುದಕ್ಕೆ.
೪. ವಿವಿಧ ರೀತಿಯ ಹೆಚ್ಚು ಬಗೆ ಬಗೆಯ ಟ್ಯಾಕ್ಸುಗಳನ್ನು ಕಟ್ಟುತ್ತಿರುವುದಕ್ಕೆ
೫. ಅತಿ ದುಬಾರಿ ಬೆಲೆಗೆ ವಸ್ತುಗಳನ್ನು ಕೊಳ್ಳುತ್ತಿರುವುದಕ್ಕೆ
೬. ಸ್ವಿಸ್ ಬ್ಯಾಂಕಿನಲ್ಲಿ ಎಣಿಸಲಾಗದಷ್ಟು ಹಣವನ್ನು ನಮ್ಮ ಕೊಳಕು ರಾಜಕಾರಣಿಗಳು ಇಟ್ಟಿದ್ರೂ ಮನರಂಜನೆಯಂತೆ ಕೇಳಿ ಅಬ್ಬಾ ಅಂತ ಸುಮ್ಮನಿರುವುದಕ್ಕೆ
೭. ದೇಶ ರಕ್ಷಣೆಯ ನೆಪವೊಡ್ಡಿ ಆದಾಯದ ಅರ್ಧ ಭಾಗವನ್ನು ಸೇನಾ ರಕ್ಷಣೆಗಾಗಿ ವ್ಯಯಿಸುತ್ತಿರುವುದಕ್ಕೆ..
೮. ದೇಶದ ಮೇಲೆ ಧಾಳಿ ಮಾಡಿದ್ರೂ ಕಸಬ್ ನಂಥ ಭಯೋತ್ಪಾದಕರಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ನೋಡಿಕೊಳ್ಳುತ್ತಿರುವುದಕ್ಕೆ
೯. ಗಣಿಯನ್ನು ತೋಡಿ ಹಗಲು ದರೋಡೆ ಮಾಡಿದ್ರೂ, ಯುಟಿಲಿಟಿ ಬಿಲ್ಡಿಂಗ್ ನ ಅಡವಿಡೋಕೆ ಶುರು ಮಾಡಿದ್ರೂ ಶಾಂತಿ ತತ್ವದಿಂದ ಕುಳಿತು "ಹೀಗಾಗಬಾರದಿತ್ತು" ಅಂತ ಮರುಗುತ್ತಿರುವುದಕ್ಕೆ
೧೦. ಇಷ್ಟೆಲ್ಲಾ ಮಾಡಿದ್ರೂ ಮತ್ತೆ ಸಹಾಯ ಮಾಡ್ತಾರೆ ಅನ್ನೋ ಭರವಸೆಗಳಿಂದ ಅದೇ ರಾಜಕಾರಣಿಗಳನ್ನು ನಂಬಿ ಓಟು ಹಾಕುತ್ತಿರುವುದಕ್ಕೆ

ನಿಜಕ್ಕೂ ನಾವು ಭಾರತೀಯರೆಂದು ಹೆಮ್ಮೆ ಪಡೋಣ.. ಖುಷಿ ಪಡೋಣ.. ನಮ್ಮ ತ್ಯಾಗಕ್ಕೆ, ನಮ್ಮ ಮನಸಿನ ಉದಾರತೆಗೆ, ಕ್ಷಮಾ ಗುಣಕ್ಕೆ ಸರಿಸಾಟಿ, ಯಾವ ದೇಶದವರೂ ಇಲ್ಲ ಎಂದು ಗರ್ವ ಪಡೋಣ.. ಜೈ ಭಾರತ ಮಾತಾ..!! 

ಇಂತಿ ಹೆಮ್ಮೆಯ ಹುಡುಗ
ಸವಿ ನೆನಪಿನ
Shek(spe)ar
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved