Share This Article To your Friends

ಮತ ನೀಡಲ್ಲ ಎಂದಿದಕ್ಕೆ ನಾಯಿಯನ್ನ ಕೊಂದ ವ್ಯಕ್ತಿ ! ಯಾಕೆ ಗೊತ್ತಾ?


ಮತ ನೀಡಲ್ಲ ಎಂದಿದಕ್ಕೆ ನಾಯಿಯನ್ನ  ಕೊಂದ ವ್ಯಕ್ತಿ ! ಯಾಕೆ ಗೊತ್ತಾ?


ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಪ್ರಜೆಗಳಿಗೆ  ತಮಗೆ ಇಷ್ಟವಾದ ಪಕ್ಷಕ್ಕೆ ಮತ ನೀಡುವ ಸ್ವಾತಂತ್ರ್ಯವಿದೆ. ಅಭ್ಯರ್ಥಿಗಳೂ ಕೂಡ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಪ್ರಜೆಗಳಲ್ಲಿ ವಿನಂತಿಸಿಕೊಳ್ಳಬಹುದೇ ವಿನಃ ತಮ್ಮದೇ ಪಕ್ಷಕ್ಕೆ ಮತ ನೀಡಬೇಕು ಎಂದು ಒತ್ತಾಯ ಮಾಡುವಂತಿಲ್ಲ. ಆದರೆ ಇಲ್ಲೊಬ್ಬ ಭೂಪ ತಮ್ಮ ಪಕ್ಷಕ್ಕೇ ಮತ ನೀಡಬೇಕೆಂದು ಒತ್ತಾಯ ಮಾಡಿ ರಂಪಾಟವೇ ಸೃಷ್ಟಿ ಮಾಡಿದ್ದಾನೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗ್ ತಾಂತ್ಸೆವಾಡದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುನಿಲ್ ತಾಮಸೆ ಎಂಬುವವರೇ ರಂಪಾಟಕ್ಕೆ ಕಾರಣವಾದ ವ್ಯಕ್ತಿ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪುಸುತ್ತಿರುವ ಹಿನ್ನೆಲೆಯಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಗೆ ಮತ ನೀಡುವಂತೆ ಕೋಡಿಭಾಗ್ ಸಂತೋಷ್ ಕಾಂಬ್ಳೆ ಎಂಬುವವರಿಗೆ ಬೆದರಿಸಿದ್ದಾರೆ. ಇದಕ್ಕೆ ಒಪ್ಪದ ಅವರು ಮತ ನೀಡುವುದಿಲ್ಲ ಎಂದು ನಿರಾಕರಿಸಿದಾಗ ಸುನಿಲ್ ತಾಮಸೆ ತನ್ನ ಮನೆಯಲ್ಲಿದ್ದ ಏರ್ ಗನ್ ತಂದು ನಾಯಿಯನ್ನು ಕೊಂದು ಹಾಕಿದ್ದಾನೆ.

ಇಷ್ಟಕ್ಕೂ ಸುನಿಲ್ ತಾಮಸೆ ನಾಯಿಯನ್ನ ಕೊಲ್ಲಲು ಕಾರಣ ಏನಂದ್ರೆ ಸಂತೋಷ್ ಕಾಂಬ್ಳೆ ಮತ ನೀಡಲು ನಿರಾಕರಿಸಿದ್ದರಿಂದ ಅವನನ್ನು ಬೆದರಿಸಲು ತಾಮಸೆ ಏರ್ ಗನ್ ತಂದಿದ್ದ ಆದರೆ ಅಷ್ಟರಲ್ಲೇ ನಾಯಿ ಬೊಗಳಿದ್ದರಿಂದ ಕುಪಿತಗೊಂಡ ತಾಮಸೆ ನಾಯಿಯನ್ನೇ ಏರ್ ಗನ್ ನಿಂದ ಕೊಂದು ಹಾಕಿದ.

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved