Share This Article To your Friends

ಮಹಾತ್ಮಾ ಗಾಂಧಿ ವಿದೇಶದಲ್ಲಿ "ದಸರಾ" ಆಚರಿಸಿದ್ದರು.



ದ.ಆಫ್ರಿಕ : ಮಹಾತ್ಮಾ ಗಾಂಧಿಜಿಯವರು ವಿದೇಶದಲ್ಲಿ ಇದ್ದ ಸಮಯದಲ್ಲಿ "ದಸರಾ ಹಬ್ಬ"ವನ್ನು ಅಲ್ಲಿನ ಭಾರತೀಯ ಮೂಲ ನಿವಾಸಿಗಳೊಂದಿಗೆ ಸೇರಿ ವಿಜೃಂಭಣೆಯಿಂದ ಆಚರಿಸಿದ್ದರು. ಈ ಅದ್ದೂರಿ ವಿದೇಶೀ ದಸರಾದಲ್ಲಿ ವಿಡಿ ಸಾವರ್ಕರ್‌ ಕೂಡ ಭಾಗಿಯಾಗಿದ್ದರು.

ಮಹಾತ್ಮಾ ಗಾಂಧಿಯವರಿಗೆ ಭಾರತೀಯ ಸಂಪ್ರದಾಯಗಳ ಮೇಲೆ ಹೆಚ್ಚಿನ ಗೌರವವಿತ್ತು. ತಾವು ಎಲ್ಲೇ ಇದ್ದರೂ ಭಾರತೀಯ ಸಂಪ್ರದಾಯಗಳನ್ನು, ನಿಯಮಗಳನ್ನು ಎಂದಿಗೂ ಮುರಿಯುತ್ತಿರಲಿಲ್ಲ. ವಿಧಿವತ್ತಾಗಿ ಪಾಲನೆ ಮಾಡುತ್ತಿದ್ದರು.

ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚಾಗಿದ್ದ ಸಮಯದಲ್ಲಿ, ಸಸ್ಯಹಾರಿಗಳಾಗಿದ್ದ ಮಹಾತ್ಮಾ ಗಾಂಧಿಯವರು ದಕ್ಷಿಣ ಲಂಡನ್ನಿನಲ್ಲಿ ಸಸ್ಯಾ ಹಾರಿಗಳ ಸೊಸೈಟಿಯನ್ನು ಕಟ್ಟಿದ್ದರು.  ಇದೇ ಸಮಯದಲ್ಲಿ ವಿನಾಯಕ ಸಾವರ್ಕರ್‌ ಮತ್ತು ಅಲ್ಲಿನ ನಿವಾಸಿಗಳೊಂದಿಗೆ ಜೊತೆಗೂಡಿ ದಸರಾ ಹಬ್ಬವನ್ನು ಆಚರಿಸಿದರು. ಚತುರವಾಗ್ಮಿಯಾಗಿದ್ದ ವಿಡಿ ಸಾವರ್ಕರ್‌ ಅವರು ಈ ಸಮಯದಲ್ಲಿ ಅದ್ಭುತವಾಗಿ ಭಾಷಣ ಮಾಡಿದ್ದರು. ಈ ಭಾಷಣವೇ ಆ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved