Share This Article To your Friends

ಇಡೀ ಜಗತ್ತು ಹುಡುಕಿದ್ರೂ ಈಕೆಗೊಬ್ಬ ಗಂಡ ಸಿಗಲಿಲ್ಲ..!

ಶಾಂಘಾಯ್ : ಗಂಡ ಬೇಕು ಗಂಡ. ಯಾವುದೇ ಜಾತಿಯಾದ್ರೂ ಓಕೆ. ಯಾವುದೇ ಧರ್ಮ ಆದ್ರೂ ಓಕೆ. ಆದ್ರೆ ಗಂಡಸಾಗಿದ್ರೆ ಸಾಕು. ಹೀಗೆ ವಿರಹ ವೇದನೆಯ ಹಾಟ್ ಹಾಟ್ ಕನಸುಗಳಲ್ಲಿ ಬಾಳ ಸಂಗತಿಗಾಗಿ ಕಾಯುತ್ತಿದ್ದಾಳೆ ಈ ಚೀನಾದ ಕನ್ಯೆ ಕ್ಸು ಜಿಯಾಜಿ.

ಈಕೆ ಕಳೆದ ಐದು ವರ್ಷಗಳಿಂದ ಅದೆಷ್ಟೋ ಹುಡುಗರ ಜೊತೆ ಡೇಟಿಂಗ್ ಮಾಡಿದ್ದಾಳೆ. ಆದ್ರೆ ಒಬ್ಬ ಹುಡುಗನೂ ಕೂಡ ಈಕೆಯನ್ನು ವರಿಸೋದಕ್ಕೆ ಮುಂದಗಲಿಲ್ಲವಂತೆ. 31 ವರ್ಷದ ಈಕೆಯ ಮದುವೆಯ ಬಗ್ಗೆ ಪೋಷಕರು ಸಾಕಷ್ಟು ಚಿಂತೆಗೀಡಾಗಿದ್ರು. ಕಂಡ ಕಂಡವರಿಗೆ ಈ ಹುಡುಗಿಯನ್ನು ತೋರಿಸಿ ಮದುವೆ ಆಗಿ ಅಂತ ಬೇಡಿಕೊಂಡ್ರು. ಆದ್ರೆ ಈಕೆಯ ಕನ್ಯಾಸೆರೆ ಬಿಡಿಸೋ ಪುರುಷ ಸಿಂಹ ಮಾತ್ರ ಸಿಗಲೇ ಇಲ್ಲ.

ಹೀಗಾಗಿ ಚೀನಾದಲ್ಲಿ "ಕಿಕ್ಸಿ" ಅಂತ ವಿಶೇಷ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಅಲ್ಲೂ ಕೂಡ ಈ ಹುಡುಗಿ ತನ್ನ ಭಾವಿ ಪತಿಯಾಗೋಕೆ ಯಾರಾದ್ರೂ ಮುಂದೆ ಬರ‍್ತಾರಾ ಅಂತ ಹೃದಯದ ಬಾಗಿಲು ತೆರೆದುಕೊಂಡು ಕಾಯ್ತಾ ಇದ್ದಳು. ಪಾಪ ಆಕೆಗೆ ಅಲ್ಲೂ ಕೂಡ ಯಾರೂ ಸಿಗಲಿಲ್ಲ..

ಹುಡುಗಿ ನೋಡೋಕೆ ಚೆನ್ನಾಗೇ ಇದ್ದಾಳೆ. ನೀವೇನಾದ್ರೂ ಟ್ರೈ ಮಾಡ್ತೀರ ಅಂತ ನೋಡಿ..? ಟ್ರೈ ಮಾಡೋಕೆ ಮೊದಲು ಪಾಸ್ ಪೋರ್ಟ ರೆಡಿ ಇದ್ಯ ಅಂತ ನೋಡ್ಕೊಳ್ಳಿ.


Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved