Share This Article To your Friends

ಚಳಿಯಲ್ಲಿ, ಮೈ ಬಿಸಿಯಾದ ಕಥೆ


ರಾತ್ರಿ ಹನ್ನೆರಡು ವರೆಗೆ ಆಗಿತ್ತು... ನಾನು ನನ್ ಗಂಡ ಇಬ್ರೂ ಮಂಗ್ಳೂರ್ಗ್ ಹೋಗ್ತಾ ಇದ್ವಿ.. ಕಾರಲ್ಲಿ... ನಾನು ಅವರ ಪಕ್ಕಾನೇ ಕೂತ್ಕೊಂಡಿದ್ದೆ.. ಅವರು ಡ್ರೈವ್ ಮಾಡ್ತಾ ಇದ್ರು.. ರಾತ್ರಿ ಆಗಿದ್ರಿಂದ ನಿಧಾನಕ್ಕೆ ನಾನು ನಿದ್ದೆಗೆ ಜಾರ್ಬಿಟ್ಟೆ.

ಸ್ವಲ್ಪ ಹೊತ್ತಾದ್ಮೇಲೆ ಯಾಕೋ ಛಳಿ ಜಾಸ್ತಿ ಆಗೋಯ್ತು.. ಮಲೆನಾಡಿನ ಪ್ರದೇಶ ಅಲ್ವಾ.. ಅದಿಕ್ಕೆ ಚಳಿ ಜಾಸ್ತಿ ಆಗ್ತಿತ್ತು ಅನ್ಕೊಂಡೆ..  ಕಣ್ ತೆರೆದು ನೋಡಿದೆ.. ಕಾರು ನಿಂತಿತ್ತು.. ಪಕ್ಕ ನೋಡಿದೆ.. ನಮ್ಮೋರು ಇರಲಿಲ್ಲ..

  ಸುತ್ಲೂ ನಾಯಿಗಳು ನರಿಗಳೂ ಕೂಗ್ತಾ ಇದ್ವು.. ಹಿಂದೆ ತಿರುಗಿ ನೋಡಿದೆ.. ಯಾರೂ ಇರಲಿಲ್ಲ.. ನಮ್ಮೋರು ಎಲ್ಹೋದ್ರು ಅಂತ ಯೋಚನೆ ಮಾಡ್ತಾ ಇದ್ದೆ.. ಅಷ್ಟರಲ್ಲೇ ಕಾರ್ ಡೋರ್ ಓಪನ್ ಅಯ್ತು.. ಸಡನ್ ಆಗಿ ತಿರುಗಿ ನೋಡಿದೆ.. ನಮ್ಮೋರೆ.. ಅಬ್ಬಾ.. ಸಮಾಧಾನ ಆಯ್ತು.. 

“ಎಲ್ಲಿಗ್ರೀ ಹೋಗಿದ್ರೀ ಒಬ್ಬಳನ್ನೇ ಬಿಟ್ಟು” ಅಂತ ಕೇಳ್ದೆ.. ಇಲ್ಲೇ ಹೋಗಿದ್ದೆ ಕಣೆ ಅಂತ ಬಂದು ಒಳಗೆ ಕೂತ್ಕೊಂಡ್ರು.. ಕಾರ್ ಸ್ಟಾರ್ಟ ಮಾಡಿದ್ರು.. ನಾನು ಹಿಂದಿನ ಸೀಟಲ್ಲಿ ಇದ್ದ ಸ್ವೆಟರ್ ತಗೊಂಡು ನಮ್ಮೋರ್ ಕಡೆ ತಿರುಗಿ ನೋಡಿದೆ.. ಅರೆ.. ಅವ್ರೇ ಇರಲಿಲ್ಲ.. ಡ್ರೈವಿಂಗ್ ಸೀಟ್ ಖಾಲಿ ಆಗಿತ್ತು..!   

ಇದ್ದಕ್ಕಿದ್ದಂಗೆ ಕಾರ್ ಮೇಲೆ ಯಾರೋ ಕುಟ್ಟುತಾ ಇರೋ ಶಬ್ಧ.. ಧಡ್ ಧಡ್ ಅಂತ.. ಭಯದಲ್ಲೇ ಕೆಳಗಿಳಿದು ನಿಧಾನಕ್ಕೆ ಮೇಲೆ ನೋಡಿದೆ.. ಯಾರೋ ವಿಚಿತ್ರವಾದ ವ್ಯಕ್ತಿ ನನ್ನ ಗಂಡನ ತಲೇನ ಕತ್ತರಿಸಿ, ಆ ತಲೆಯಿಂದಾನೇ ಕಾರ್ ಮೇಲೆ ಧಡ್ ಧಡ್ ಅಂತ ಕುಟ್ತಾ ಇದ್ದ.. ಕಾರ್ ಹಿಂದೆ ನೋಡಿದೆ.. ಅಲ್ಲಿ ರುಂಡ ಇಲ್ಲದ ನನ್ನ ಗಂಡನ ಮುಂಡ ಬಿದ್ದಿತ್ತು..

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved