Share This Article To your Friends

ಯಶ್ ಮತ್ತು ರಾದಿಕಾ ಪಂಡಿತ್ ಮಧ್ಯೆ ಏನೇನೋ ನಡೀತೈತ್ರಪ್ಪೋ..!!




ಅಬ್ಬಬ್ಬೋ.... ಅಯ್ಯಯ್ಯೋ... ಏನ್ ಮಾಡೋದ್ ಶೀವ,.... ಇರೋ ಒಂದ್ ಸ್ಯಾಂಡಲ್‌ವುಡ್ ಹುಡ್ಗೀನೂ ಈಗ ಯಶ್ ಜೊತೆ ಕಮಿಟ್ ಆಗೋದ್ಳಲ್ಲೋ... ಈಗ ನಾವ್ ಯಾರನ್ನೋ ಲವ್ ಮಾಡೋದು..?? ರಮ್ಯಾ ನೋಡಿದ್ರೆ ಫಾರಿನ್ ಹುಡುಗನ್ ಜೊತೆ ಓಡಾಡ್ತಾಳೆ.. ಪೂಜಾ ನೋಡಿದ್ರೆ ರಂಪಾಟ ಮಾಡ್ತಾರೆ.. ಮಿಸ್ ಆಗಿ ಮದ್ವೆ ಆದ್ರೆ, ಆ ಪಕ್ಷದಿಂದ ಈ ಪಕ್ಷಕ್ಕೆ ಹಾರಿ “ಪಕ್ಷಾಂತರ ಮಾಡೋಥರ ಗಂಡನಿಗೆ “ಗಂಡಾಂತರ” ತಂದು ಬಿಡ್ತಾಳೆ.. ಇನ್ಯಾರೋ ಈಗ ಸ್ಯಾಂಡಲ್ ವುಡ್ ಗೆ ಸ್ಟಾರು..???

ಹೀಗೆ ವಟ ವಟ ಅಂತ ಮನದ ತುಡಿತವನ್ನು ಹೊರ ಹಾಕಿದ್ದು ನಟಿ “ರಾಧಿಕಾ” ಪಕ್ಕಾ ಅಭಿಮಾನಿ ಶಂಕರ್.. ಇದ್ದಕ್ಕಿದ್ದಂತೆ ಅಭಿಮಾನಿಯೊಬ್ಬನ ಬಾಯಿಂದ ರಾಧಿಕ ಮದ್ವೆ ಅನ್ನೋ ಮಾತು ಕೇಳಿದ ನಮಗೆ ಶಾಕ್ ಆಗಿತ್ತು.. ಸುದ್ದಿ ಎಲ್ಲೆಲ್ಲಿಂದ ಸಿಗುತ್ತೆ ನೋಡಿ.. ಅಭಿಮಾನಿ ನೋವಿನ ಹೃದಯದಿಂದ ಸುದ್ದಿ ಸಿಕ್ಕ ತಕ್ಷಣ ಸುದ್ದಿ ಬೇಟೆಗೆ ನಾವೂ ಕೂಡ ತಯಾರಾದೆವು.. 

          ಪಕ್ಕಾ ಗಾಂಧಿನಗರದ ಸುತ್ತೆಲ್ಲಾ ಸುತ್ತಿದಾಗ ಒಂದು ವಿಷಯ ಸ್ಪಷ್ಟವಾಗಿಹೋಯ್ತು.. “ರಾಧಿಕ ಮತ್ತು ಯಶ್ ಮಧ್ಯೆ ಏನೇನೋ ನಡೀತಿದೆ ಅಂತ... ಅಷ್ಟೇ ಅಲ್ಲ.. ಈಗಾಗಲೇ ಏನೇನೋ ನಡೆದುಬಿಟ್ಟಿದೆ.. ಅದೂ ಯಾರಿಗೂ ಗೊತ್ತಾಗದಂತೆ,, ಸದ್ದು ಗದ್ದಲವಿಲ್ಲದೇ ಇಂಥದ್ದೊಂದು ದೊಡ್ಡ ವಿಷಯ ಒಳಗೊಳಗೆ ಮರದಂತೆ ಬೆಳೀತಿದೆ.
.
          ಏನ್ ನಡೆದಿದೆ ರಾಧಿಕ ಮತ್ತು ಯಶ್ ಮಧ್ಯೆ ಅಂದ್ರಾ..?? ಅರೆ.. ಅಂಥದ್ದೇನೂ ಇಲ್ಲ.. ರಾಧಿಕ ಮತ್ತು ಯಶ್ ಮಧ್ಯೆ ಪ್ಯಾರ್ ಗೆ ಆಗ್ಬಿಟ್ಟಿದ್ಯಂತೆ.. ಇಬ್ರೂ ಒಂದ್ ಶೂಟಿಂಗ್ ಟೈಮಲ್ಲಿ ಪ್ರಪೋಸ್ ಮಾಡ್ಕೊಂಡ್ ಬಿಟ್ಟವ್ರೆ.. ಗ್ರೀನ್ ಸಿಗ್ನಲ್ ಸಿಕ್ಕಿದ್ಮೇಲೆ ಸುಮ್ನೇ ಇರೋ ಜಾಯ್ಮಾನ ಇಬ್ರುದ್ದೂ ಅಲ್ಲ.. ಅದಿಕ್ಕೆ ಆವತ್ತೇ ಮದ್ವೆ ವಿಷ್ಯಾನ ಪ್ರಸ್ತಾಪ ಮಾಡಿಬಿಟ್ಟಿದ್ದಾರಂತೆ.. ಅದಕ್ಕೆ ಇಬ್ರೂ ಸೇರಿ ಒಂದ್ ನಿರ್ಧಾರಕ್ಕೆ ಬಂದ್ರು.. “ಈಗಂತು ಸಿನೆಮಾ ಶುಟಿಂಗ್ ನಲ್ಲಿ ಇಬ್ರೂ ತುಂಬಾನೇ ಬಿಸಿ ಆಗಿದ್ದೀವಿ.. ಅದಿಕ್ಕೆ ಈಗಿರೋ ಎಲ್ಲಾ ಸಿನೆಮಾ ಪ್ರಾಜೆಕ್ಟ್ ಗಳನ್ನು ಮುಗಿಸಿ, ಸ್ವಲ್ಪ ಉಸಿರಾಡುವಷ್ಟು ಅವಕಾಶ ಸಿಕ್ಕಾಗ ಮದ್ವೆ ಕಾರ್ಯವನ್ನು ಶುರು ಮಾಡೋಣ” ಅಂತ ಒಪ್ಪಂದ ಮಾಡ್ಕೊಂಡವ್ರಂತೆ ಯಶ್ ಮತ್ತು ರಾಧಿಕ ಪಂಡಿತ್ತು.. 


ಯಶ್ ಮತ್ತು ರಾಧಿಕ ಪಂಡಿತ್ ನಡುವಿನ “ಲವ್” ಸಿನೆಮಾ ಮಾಡೋಕ್ ಮೊದಲಿಂದಲೂ ಇತ್ತು..??


ಹೌದು.. ಹೀಗೊಂದು ಪ್ರೆಶ್ನೆ ಗಾಂಧೀನಗರದಲ್ಲಿ ಕಾಡಿದ್ದು ನಿಜ.. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಈ ಹಿಂದೆ ಈ.ಟಿವಿ ಯ “ನಂದಗೋಕುಲ” ಧಾರಾವಾಹಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ರು.. ಇಬ್ಬರ ನಡುವೆ ಉತ್ತಮ ಸ್ನೇಹ ಬಂಧನ ಬೆಳೆದಿದ್ದು ಆಗಿಂದಾನೆ.. ದಿನಕಳೆದಂತೆ ಸ್ನೇಹ ಬಂಧನ ಹೆಚ್ಚಾಗಿದ್ದು ಮಾತ್ರ ಸುಳ್ಳಲ್ಲ..


 ಶಶಾಂಕ್ ನಿರ್ದೇಶನಮ ಮೊದಲ ಸಿನೆಮಾ “ಮೊಗ್ಗಿನ ಮನಸು” ಚಿತ್ರದಲ್ಲಿ ಕೂಡ ಇಬ್ಬರು ಜೊಡಿಯಾಗಿ ಕಾಣಿಸಿಕೊಂಡಿದ್ರು.. ಇದು ಇಬ್ಬರಿಗೂ ಮೊದಲ ಸಿನೆಮಾ.. ಇಬ್ಬರಿಗೂ ಅತ್ಯುತ್ತಮ ಹೆಸರನ್ನು ತಂದುಕೊಟ್ಟಿತ್ತು.. ರಾಧಿಕಾಗಂತೂ ಮೊದಲ ಸಿನೆಮಾದಲ್ಲೆ ಫಿಲಂಫೇರ್ ಪ್ರಶಸ್ತಿ ಗಳಿಸಿದ ಸಂಭ್ರಮ. ಇದಾದ ನಂತರ ಸರ ಸರನೇ ರಾಧಿಕಾ ಪಂಡಿತ್ ಮತ್ತು ಯಶ್ ಜೋಡಿಯ ಸಿನೆಮಾಗಳು ಬರತೊಡಗಿದವು.. ಬಹುಶ ಈ ಸಂದರ್ಭದಲ್ಲಿ ಆತ್ಮೀಯತೆ, ಸ್ನೇಹ, ವಿಶ್ವಾಸಗಳು ಪ್ರೇಮಕ್ಕೆ ತಿರುಗಿವೆ... ಒಂದೇ ವೃತ್ತಿ... ಜೊತೆಗಿದ್ದು ಅರಿತುಕೊಂಡ ಮನಸುಗಳು.. ಈಗ ಜೀವನ ಪೂರ್ತಿ ಜೊತೆಯಾಗಿರುವ ಕನಸು ಕಾಣುತ್ತಿವೆ.. ಇರಲಿ ಬಿಡಿ.. ಒಟ್ನಲ್ಲಿ ಖುಷಿಯಾಗಿರಲಿ ಎಂಬುದು ನಮ್ಮ ಆಶಯ..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved