Share This Article To your Friends

ಮೂರ್ಖರನ್ನು ಮಾಡಲು ಹೋದವರು ಮೂರ್ಖರಾದರು



ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಿದ್ದ. ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು. ಒಮ್ಮೆ ಬೀರಬಲ್ ಸಭೆಗೆ ಬಂದಾಗ ರಾಜ ಎಲ್ಲರ ಸಲಹೆಯಂತೆ ಅಕ್ಬರ್  ನು ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ ಎಂದು ಕೇಳಿದರು.. ಆಗ ಬೀರಬಲ್ ನನಗೆ ನಾಣ್ಯ ಬೇಕುಎಂದು ಹೇಳಿದ.. ಅಕ್ಬರನಿಗೆ ಮಾತು ಕೇಳಿ ಬೇಸರವಾಯ್ತು.. ‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ.. ನ್ಯಾಯಕ್ಕಾಗಿ ಶ್ರಮಿಸುವ ನ್ಯಾಯವಂತ ಎಂದುಕೊಂಡಿದ್ದೆ..  ಆದರೆ ನೀನು ನನಗೆ ನಿರಾಸೆ ಮಾಡಿದೆ.. “ನಮ್ಮ ರಾಜ್ಯದಲ್ಲಿ ನ್ಯಾಯ ನೆಲೆಸುವಂತೆ ಮಾಡುತ್ತೀಯ ಎಂದುಕೊಂಡಿದ್ದೆ.. ಆದರೆ ನೀನು  ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದರು ಅಕ್ಬರ

ಅದಕ್ಕೆ ಬೀರಬಲ್ ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ, ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದ್ದೆ, ನ್ಯಾಯ ತುಂಬಿ ತುಳುಕುತ್ತಿರುವಾಗ ಮತ್ತೆ ನ್ಯಾಯ ಬೇಕು ಎಂದು ಕೇಳುವುದು ಮೂರ್ಖತನವಲ್ಲವೇ..??  ಅದಕ್ಕೆ ನಾನು ನಾಣ್ಯ ಕೇಳಿದೆಎಂದು ಉತ್ತರಿಸಿದ. ಅಕ್ಬರನಿಗೆ ಬೀರಬಲ್ಲನ ಮಾತು ಕೇಳಿ ಸಮಾಧಾನವಾಯ್ತು.. ಆಸ್ಥಾನಿಕರಿಗೆ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved