Share This Article To your Friends

ದೆವ್ವದ ಜೊತೆಗೆ ಆತ ಸಂಸಾರ ನಡೆಸಿದ್ದ..!!

ಗೌರಿ ಬಿದನೂರಿನಲ್ಲಿ ನಡೆದ ಘಟನೆ ಇದು.. ಒಬ್ಬ ಬ್ಯಾಚುಲರ್ ಹುಡುಗ ಕಾಡು ಕಡಿಯೋಕೆ ತೋಪಿಗೆ ಹೋಗ್ತಿದ್ದ.. ಆವತ್ತು ಸ್ವಲ್ಪ ರಾತ್ರಿ ಆದ್ದರಿಂದ ಲೇಟಾಗಿ ಬರ್ತಾ ಇದ್ದ. ದಾರೀಲಿ ಒಂದು ಹುಡುಗಿ ಇದ್ಳು.. ಅವಳನ್ನು ನೋಡಿ ಯಾಕಮ್ಮ ಇಲ್ಲಿದ್ದೀಯ ಅಂತ ಕೇಳಿದ ಅದಕ್ಕೆ ಅವಳು “ನಂಗೆ ದಾರಿ ಕಾಣ್ತಿಲ್ಲ.. ನೀವು ಕರ್ಕೊಂಡು ಹೋದ್ರೆ ನಿಮ್ ಜೊತೆ ಬರ್ತೀನಿ ಅಂತ ಹೇಳಿದಳು.. ಅವನು ತನ್ನ ಮನೆಗೆ ಕರ್ಕೊಂಡು ಹೋದ. ಪ್ರತಿ ದಿನ ಅವಳು ಅವನಿಗೆ ಊಟ ಮಾಡಿಸಿ ಮಲಗಿಸ್ತಾ ಇದ್ಳು. ಬೆಳಿಗ್ಗೆ ಏಳುವಷ್ಟರಲ್ಲಿ ಅಡುಗೆ ರೆಡಿ ಮಾಡ್ತಾ ಇದ್ಳು.  ಒಂದು ತಿಂಗಳು ಹೀಗೇ ಕಳೀತು.  ಒಂದಿನ ರಾತ್ರಿ ಯಾವುದೋ ಸದ್ದಿನಿಂದ ಅವನಿಗೆ ಎಚ್ಚರವಾಯ್ತು., ನಿಧಾನವಾಗಿ ಹೊದಿಕೆ ಎತ್ತಿ ನೋಡ್ತಾನೆ.. ಅವಳು ತನ್ನ ಎರಡೂ ಕಾಲುಗಳನ್ನು ಒಲೆಯಲ್ಲಿ ಇಟ್ಟು ಅಡುಗೆ ಮಾಡ್ತಿದ್ಳು. ತನ್ನ ನಾಲಿಗೆಯನ್ನು ಉದ್ದ ಚಾಚಿ ಮುದ್ದೆ ಕಲಿಸ್ತಾ ಇದ್ಳು.. ಇವನು ಅದೆಲ್ಲಾ ನೋಡಿ ಬೆಚ್ಚಿ ಬಿದ್ದ. ಆದ್ರೂ ಏನೂ ಗೊತ್ತಿಲ್ಲದಂತೆ ಸುಮ್ಮನೆ ಮಲಗಿದ. ಮಾರನೆಯ ದಿನ ಎದ್ದು ನಿಮ್ ಊರು ಯಾವು ಅಂತ ಹೇಳು ಅಲ್ಲಿಗೆ ಬಿಟ್ಟು ಬರ್ತೀನಿ ಅಂತ ಹೇಳಿದ. ಅದಕ್ಕೆ ಆ ದೆವ್ವಾ “ನಂಗೆ ಯಾವ ಊರೂ ಇಲ್ಲ.. ನನ್ನೋರು ಯಾರೂ ಇಲ್ಲ.. ಇಲ್ಲೇ ಇರ್ತೀನಿ ಅಂತು. ಆಗ “ನಿಂಗೆ ಏನ್ ಇಷ್ಟ” ಅಂತ ಕೇಳಿದ.. ಚಿಕನ್ ಅಂದ್ರೆ ಇಷ್ಟ ತಂದು ಕೊಡ್ತೀಯ ಅಂತ ಕೇಳಿತು.ಅದಕ್ಕೆ ಅವನು ಚಿಕನ್ ತಂದು ಕೊಟ್ಟು ಅವಳನ್ನು ಕರೆದು ಕೊಂಡು ಹಾಗೇ ತಂಪು ಗಾಳಿಯಲ್ಲಿ ಕರೆದುಕೊಂಡು ಬಂದ.. ಅವಳು ಸಿಕ್ಕಿದ್ದ ಜಾಗದ ಹತ್ರ ಬಂದ ತಕ್ಷಣ ಅವನು ಅವಳ ತಲೆಯೆ ಮೇಲೆ ಮೊಳೆ ತಗೊಂಡು ಕುಟ್ಟಿ ಬಿಟ್ಟ.,. ಆದೆವ್ವ ಅದೇ ಜಾಗದಲ್ಲಿ ನಿಂತು ಬಿಟ್ಟಿತು.. ಆಮೇಲೆ ಮಾಯ ಆಯ್ತು.. ಆ ಮೇಲೆ ಆ ದೆವ್ವ ನಿಂತಿದ್ದ ಜಾಗದಲ್ಲಿ ಮೊಳೆ ಹೊಡೆದು ಬಂದ. ಆ ದೆವ್ವ ಅಲ್ಲೇ ಉಳೀತು.. ಇವನು ಓಡೋಡಿ ಬಂದು ಮನೆ ಸೇರಿದ.. ಮತ್ತೆ ಆ ಕಡೆ ಹೋಗಲೇ ಇಲ್ಲ....
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved