Share This Article To your Friends

ಅಸ್ಸಾಮಿನ ವ್ಯಕ್ತಿಗೆ ಕಂಡಿತ್ತು ಭಯಾನಕ ಭೂತ

ಬೆಂಗಳೂರಿನಲ್ಲಿ ಒಂದು BMTC  ಬಸ್ ಸ್ಟಾಪ್ ಕಟ್ತಾ ಇದ್ರು.. ರಾತ್ರಿ ಯಾರೋ ಒಬ್ಬ ವ್ಯಕ್ತಿ ಬಿಲ್ಡಿಂಗ್ ನ ಟಾಪ್ ಫ್ಲೋರ್ ನಲ್ಲಿ ಕೊನೇ ಭಾಗದಲ್ಲಿ ಓಡಾಡ್ತಾ ಇದ್ದ.. ಸ್ವಲ್ಪ ಮಿಸ್ ಆದ್ರೆ ಹೆಣ ಕೂಡ ಸಿಗೋದಿಲ್ಲ.. ಅಂಥ ಡೇಂಜರ್ ಜೋನ್ ಅದು..  ಕೆಳಗಿದ್ದ ವಾಚ್ ಮ್ಯಾನ್ ಕೂಗಿ ಹೇಳಿದ “ಹೇ ಯಾರೋ ಅದು.. ಅಲ್ಲಿಂದ ಬಿದ್ರೆ ಸಾಯ್ತೀಯ.. ಕೆಳಗೆ ಬಾ ಅಂದ.. ಅವನು ಕೂಗುತ್ತಿದ್ದಂತೆ ಮೇಲಿದ್ದ ಆ ವ್ಯಕ್ತಿ ಧೋಪ್ ಅಂತ ಕೆಳಗೆ ಬಿದ್ದು ಬಿಟ್ಟ..

 ಆ ವ್ಯಕ್ತಿ ಸತ್ತುಹೋದ ಅಂತ ಅಲ್ಲಿದ್ದ ಕಾವಲುಗಾರರೆಲ್ಲರೂ ಓಡೋಡಿ ಬಂದ್ರು.. ಆದ್ರೆ ಮೇಲಿಂದ ಬಿದ್ದ ವ್ಯಕ್ತಿ ಅಲ್ಲಿ ಕೆಳಗೆ ಎಲ್ಲೂ ಕಾಣಸಲೇ ಇಲ್ಲ.. ಸುತ್ತಲೂ ನೋಡಿದ್ರು.. ಆದ್ರೆ ಅವನು ಮತ್ತೆ ಆ ಬಿಲ್ಡಿಂಗ್ ಮೇಲಕ್ಕೆ ನಡೆದುಕೊಂಡು ಹೋಗ್ತಾ ಇದ್ದ.. ಹತ್ತಿರ ಹೋಗ್ತಾ ಇದ್ದಂತೆ ಹುಡುಗನಾಗಿದ್ದ ಆ ವ್ಯಕ್ತಿ ಸೀರೆ ಉಟ್ಟುಕೊಂಡ ಸುಂದರ ಯುವತಿಯಂತೆ ಕಾಣಿಸತೊಡಗಿತು.. ಇದು ಭೂತವೇ ಇರಬೇಕು ಎಂದು ಒಬ್ಬನಿಗೆ ತಿಳೀತು.. ಆದ್ರೆ ಅಸ್ಸಾಮಿನಿಂದ ಬಂದಿದ್ದ ಕಾವಲುಗಾರ ಅದನ್ನು ಒಪ್ಪಲಿಲ್ಲ. ಯಾರೋ ನಾಟಕ ಮಾಡ್ತಾ ಇದ್ದಾರೆ ಅಂತ ಅದರ ಹಿಂದೆ ಹೀಗಿ ಆ ಸೀರೆಯುಟ್ಟ ನಾರಿಯನ್ನು ಹಿಡಿದುಬಿಟ್ಟ,. ಧಡಕ್ ಅಂತ ಆ ನಾರಿ ಹಿಂದೆ ತಿರುಗಿಬಿಟ್ಟಳು.. 

ಸುಂದರವಾದ ಮುಖ.. ಆದ್ರೆ ಅದು ಮಾನವ ಜೀವಿಯಲ್ಲ.. ಪ್ರೇತಾತ್ಮ.. ಅವನು ಶಾಕ್ ಆದ.. “ಮೇರೆ ಊಪರ್ ಹಾತ್ ಡಾಲೇಗಾ ಕ್ಯಾ..?? ಮಗನೇ... ನನ್ನ ಮೈ ಮೇಲೆ ಕೈ ಇಡೋದಕ್ಕೆ ಎಷ್ಟೋ ಧೈರ್ಯ..?? ಅಂತ ಹೇಳಿ ತನ್ನ ಕೋರೆ ಹಲ್ಲುಗಳಿಂದ ಅವನ ಗಂಟಲನ್ನು ಕಚ್ಚಿಬಿಟ್ಟಿತು.. ಅಷ್ಟರಲ್ಲಿ ಎಲ್ಲಾ ಜನ ಓಡೋಡಿ ಬಂದ್ರು.. ಆ ದೆವ್ವ ಇದ್ದಕ್ಕಿದ್ದಂತೆ ಮಾಯವಾಯ್ತು.. ಆಮೇಲೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ರು..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved