Share This Article To your Friends

ಶಿಲ್ಪಾಶೆಟ್ಟಿಯನ್ನು ಚಿಕ್ಕ ವಯಸ್ಸಿನಿಂದಲೂ ಕಾಡಿದ ಪ್ರೆಶ್ನೆಗೆ ಈಗ ಉತ್ತರ ಸಿಕ್ಕಿತಂತೆ.



ಮುಂಬೈ : ಅಂತೂ ಇಂತೂ ಕೊನೆಗೂ ನನಗೆ ಉತ್ತರ ಗೊತ್ತಾಯ್ತು. ನಾನು ಮಗುವಾಗಿದ್ದಾಗಿನಿಂದಲೂ ಬಹಳಷ್ಟು ಜನರು ನನ್ನನ್ನು ಒಂದು ಪ್ರೆಶ್ನೆ ಕೇಳ್ತಿದ್ರು. ಅದಕ್ಕೆ ಆಗ ಉತ್ತರ ಗೊತ್ತಾಗಲಿಲ್ಲ. ಆದರೆ ಈಗ ಗೊತ್ತಾಗಿದೆ" ಅಂತ ಬಾಲಿವುಡ್ಬೆಡಗಿ ಶಿಲ್ಪಾಶೆಟ್ಟಿ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.

ಏನದು ಉತ್ತರ ಸಿಗದ ಪ್ರೆಶ್ನೆ ಅಂದ್ರಾ? ಅಂಥದ್ದೇನು ಇಲ್ಲ ಕಣ್ರಿ. ಶಿಲ್ಪಾಶೆಟ್ಟಿ ಚಿಕ್ಕ ಮಗುವಾಗಿದ್ದಾಗ "ನೀನು ದೊಡ್ಡವಳಾದಮೇಲೆ ಏನಾಗಬೇಕು ಅಂತಿದ್ದೀಯಮ್ಮಾ" ಅಂತ ಎಲ್ಲರೂ ಕೇಳ್ತಿದ್ರಂತೆ. ಆದರೆ ಆಗ ಏನು ಹೇಳಬೇಕು ಅಂತ ಶಿಲ್ಪಾಶೆಟ್ಟಿಗೆ ಗೊತ್ತಾಗುತ್ತಿರಲಿಲ್ಲವಂತೆ. ಆದರೆ ದೊಡ್ಡವಳಾದ ಮೇಲೆ ಅದರಲ್ಲೂ ನನಗೊಂದು ಮಗುವಾದ ಮೇಲೆ ನನಗೆ ಉತ್ತರ ಗೊತ್ತಾಗಿದೆ. ನಾನು ಮತ್ತೆ ಮಗುವಾಗಬೇಕು. ಮಗುವಿನಂತೆ ನಲಿಯಬೇಕು" ಎಂದು ಟ್ಟಿಟ್ಟರ್ನಲ್ಲಿ ತಮ್ಮ ಬಯಕೆಯನ್ನು ಹೊರ ಹಾಕಿದ್ದಾರೆ.

ಅಂತೂ ಇಂತು ಮಗು ಆದ ಮೇಲಾದರೂ ಉತ್ತರ ಗೊತ್ತಾಯ್ತಲ್ಲ ಅಂತ ಅವರ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved