ಶಿವನಿಗೆ ಗಂಗೆ ಮತ್ತು ಗೌರಿ ಎಂಬ ಇಬ್ಬರು ಪತ್ನಿಯರಿದ್ದಾರೆ. ಗಣೇಶ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪ ಎಂಬ ಮೂವರು ಮಕ್ಕಳಿದ್ದಾರೆ. ಶಿವನಿಗೆ ಮೂರು ಕಣ್ಣುಗಳಿದ್ದು ಮೂರನೇ ಕಣ್ಣು ನಾಶದ ಸಂಕೇತವಾಗಿದೆ. ಆ ಮೂರನೇ ಕಣ್ಣನ್ನು ತೆಗೆದರೆ ಭೂಮಂಡಲವೇ ಭಸ್ಮವಾಗುತ್ತದೆ ಎಂಬ ಮಾತಿದೆ. ಹಿಂದೊಮ್ಮೆ ಕಾಮನು ಶಿವನ ಮೇಲೆ ಹೂ ಬಾಣ ಬಿಟ್ಟಾಗ ಕುಪಿತಗೊಂಡ ಶಿವನು ಮೂರನೇ ಕಣ್ಣು ತೆರೆದು ಕಾಮನನ್ನು ಭಸ್ಮ ಮಾಡಿದ್ದ. ಹೀಗಾಗಿ ಶಿವನಿಗೆ ವಿಶೇಷ ಸ್ಥಾನವಿದೆ

