ನನಗೆ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಬ್ಯಾಟ್ ಕೊಟ್ಟಿದ್ದು ನನ್ನ ಸಹೋದರಿ ಸವಿತ. ಸವಿತ
ಕೊಟ್ಟಿರುವ ಬ್ಯಾಟ್‌ನ ನೆನಪನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನನ್ನು ದೊಡ್ಡ
ಕ್ರಿಕೇಟಿಗನಾಗಿ ನೋಡುವ ಆಸೆ ನನ್ನ ಸಹೋದರಿ ಸವಿತಾಗೆ ಇತ್ತು ಎಂದು ಹೇಳುವ ಮೂಲಕ ಸಹೋದರಿ ಸವಿತಾಳ
ಪ್ರೋತ್ಸಾಹ ಮತ್ತು ಆಕೆ ಕೊಟ್ಟ ಗಿಫ್ಟ್ ಅನ್ನು ನೆನಪು ಮಾಡಿಕೊಂಡರು ಕ್ರಿಕೆಟ್ ದೇವರು.
ಮುಂಬೈನ
ವಾಂಖೆಡೆ ಮೈದಾನದಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ತಮ್ಮ ಸಹೋದರಿಯೊಂದಿಗಿನ ಭಾವನಾತ್ಮಕ
ಬಂಧನವನ್ನು ಬಿಚ್ಚಿಟ್ಟರು. ಸೋದರಿಯ ಸಹಾಕರಕ್ಕೆ ಅಂತಿಮವಾಗಿ ಧನ್ಯವಾದಗಳನ್ನು ತಿಳಸಿದರು. ಮೊಟ್ಟ
ಮೊದಲು ಕ್ರಿಕೆಟ್ ಬ್ಯಾಟನ್ನು ನನಗೆ ನೀಡಿದ್ದು ಸಹೋದರಿ ಸವಿತ ಎಂದು ತಮ್ಮ ಕ್ರಿಕೆಟ್ ವೃತ್ತಿ
ಜೀವನದ ಆರಂಭದ ಕ್ಷಣಗಳನ್ನು ಬಿಚ್ಚಿಟ್ಟರು.
ತಮ್ಮಕ್ರಿಕೆಟ್
ಬದುಕಿಗೆ ಅಂತಿಮ ವಿದಾಯದ ಸಮಯದಲ್ಲಿ ಮಾತನಾಡಿದ
ಸಚಿನ್ ತೆಂಡೂಲ್ಕರ್ ಅವರು, ಬದುಕಿನ ಉದ್ದಕ್ಕೂ
ತಮಗೆ ಪ್ರೇರಣೆ ನೀಡಿದ ಸ್ನೇಹಿತರು, ಗುರುಗಳು, ಕುಟುಂಬ ವರ್ಗದವರು ಸೇರಿದಂತೆ, ತಮ್ಮ ಮ್ಯಾನೇಜರ್ ಅವರಿಗೂ ಮತ್ತು ಮ್ಯಾನೇಜರ‍್
ಕುಟುಂಬದವರಿಗೂ ಧನ್ಯವಾದಗಳನ್ನು ತಿಳಿಸುವುದರ ಮೂಲಕ ಕೃತಜ್ಞತೆಗಳನ್ನು ರವಾನಿಸಿದ್ದಾರೆ.