Share This Article To your Friends

"ಸಚಿನ್ ಸಚಿನ್" ಎಂಬ ನಿಮ್ಮ ಕೂಗು ಉಸಿರಿರುವವರೆಗೆ ಗುನುಗುಟ್ಟುತ್ತದೆ : ಸಚಿನ್.


ನಿಮ್ಮ ಅಭಿಮಾನ, ನಿಮ್ಮ ಪ್ರೀತಿ, ನಿಮ್ಮ ವಿಶ್ವಾಸಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪ್ರತಿಯೊಂದು ಸಮಯದಲ್ಲಿಯೂ ನೀವು ಕೂಗಿದ "ಸಚಿನ್ ಸಚಿನ್" ಎಂಬ ಕೂಗು ನನ್ನ ಕೊನೆಯ ಉಸಿರು ಇರುವವರೆಗೆ ನನ್ನ ಕಿವಿಯಲ್ಲಿ ಸದಾ ಗುನುಗುಟ್ಟುತ್ತಿರುತ್ತದೆ’. ನಿಮ್ಮ ಪ್ರೀತಿ ವಿಶ್ವಾಸ, ನಂಬಿಕೆಯೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಪ್ರತಿಯೊಂದು ಕ್ಷಣದಲ್ಲಿಯೂ ನನ್ನನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಅಂತಿಮವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ರು.

ಅಭಿಮಾನಿಗಳು ಕೂಗು ನನ್ನನ್ನು ಪ್ರೇರೇಪಿಸಿದೆ. ಈ ಎಲ್ಲಾ ಕ್ರಿಕೆಟ್‌ ಸಾಧನೆಗೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ ಎಂದು ಹೇಳಿರುವ ಸಚಿನ್ ತೆಂಡೂಲ್ಕರ್‌ ಅವರು ಅಭಿಮಾನಿಗಳತ್ತ ನೋಡುತ್ತ ಭಾವುಕರಾದರು. ಸಚಿನ್ ಸಚಿನ್ ಎಂಬ ನಿಮ್ಮ ಕೂಗು ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಕಿವಿಯಲ್ಲಿ ಗುನುಗುತ್ತಿರುತ್ತದೆ ಎಂದು ಹೇಳಿದ ಸಚಿನ್ ಭಾವುಕರಾಗಿ ಕಣ್ತುಂಬಿಕೊಂಡರು.

ಸಚಿನ್ ಅವರ ಈ ಭಾವನಾತ್ಮಕ ಮಾತುಗಳನ್ನು ಕೇಳಿದ ಅಭಿಮಾನಿಗಳು ಇನ್ನಷ್ಟು ಜೋರಾಗಿ ಸಚಿನ್ ಸಚಿನ್ ಎಂದು ಕೂಗಲು ಆರಂಭಿಸಿದ್ರು. ಈ ದೃಶ್ಯವನ್ನು ನೋಡೊದ ಸಚಿನ್ ತೆಂಡೂಲ್ಕರ್‌ ಅವರು "ನಾನು ಹೆಚ್ಚು ಭಾವುಕನಾಗಿದ್ದೇನೆ. ನಾನು ಮಾತನಾಡುತ್ತಾ ಹೋದರೆ, ಇನ್ನಷ್ಟು ಭಾವುಕನಾಗುತ್ತೇನೆ. ಎಲ್ಲರಿಗೂ ಧನ್ಯವಾದಗಳು" ಎಂದು ಹೇಳುವ ಮೂಲಕ ತಮ್ಮ ಮಾತುಗಳಿಗೆ ಬಲವಂತವಾಗಿ ಬ್ರೇಕ್ ಹಾಕಿ ಸ್ಟೇಡಿಯಂನಿಂದ ಹೊರ ನಡೆದರು.

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved