Share This Article To your Friends

ತೆರೆಯ ಮೇಲೆ ಬರಲಿದ್ದಾರೆ ನರೇಂದ್ರ ಮೋದಿ


ಅಹ್ಮದಾಬಾದ್ :  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಮಿಂಚಲಿದ್ದಾರೆ. ಮೋದಿ ಜೀವನ ಆಧಾರಿತ ಸಿನೆಮಾಗೆ ಹಾಲೀವುಡ್ ನಲ್ಲಿ ಎಲ್ಲಾ ತಯಾರಿ ಕೂಡ ನಡೆದಿದೆ.

ಹಾಲಿವುಡ್ ನಿರ್ಮಾಪಕ ಮಿತೇಶ್ ಪಟೇಲ್ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನೆಮಾವನ್ನು ಕೈಗೆತ್ತಿಕೊಳ್ಳಲಿದ್ದು ಸಂಬಂಧ ಮುಖ್ಯಮಂತ್ರಿ ನರೇಂದ್ರ ಮೋದಿಯವರೊಂದಿಗೂ ಮಾತುಕತೆ ನಡೆಸಿದ್ದಾರಂತೆ.

ಮೋದಿ ಸಿನೆಮಾದಲ್ಲಿ ಕೇವಲ ರಾಜಕೀಯ ಮಾತ್ರ ಅಲ್ಲ, ಅದರ ಜೊತೆಗೆ ಸ್ವಲ್ಪ ಮಸಾಲಾ ಸೇರಿಸಿ ಪಕ್ಕಾ ಕಮರ್ಷಿಯಲ್ಲಾಗಿ ಸಿನೆಮಾ ಮಾಡುವುದಾಗಿ ಹೇಳಿದ್ದಾರೆ ನಿರ್ಮಪಕರು. ಸಿನೆಮಾಗೆ ಎಲ್ಲಾ ತಯಾರಿಗಳು ನಡೆಯುತ್ತಿವೆ ಅಂತಿರುವ ಸಿನೆಮಾ ತಂಡ ಮೋದಿ ಪಾತ್ರವನ್ನು ಯಾರು ಮಾಡ್ತಿದ್ದಾರೆ ಅನ್ನೋದನ್ನು ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ.

ಎಲ್ಲವೂ ಅಂದುಕೊಂಡಂತೆ ಆದ್ರೆ ಮೋದಿ ಬದುಕನ್ನು ಆಧರಿಸಿದ ಸಿನೆಮಾ ಇದೇ ಡಿಸೆಂಬರ್ತಿಂಗಳ ಅಂತ್ಯದಲ್ಲಿ ತೆರೆಯ ಮೇಲೆ ಅಪ್ಪಳಿಸಲಿದೆ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved