Share This Article To your Friends
ಡಾ. ಯಡವಟ್ಟು - ಹಾಸ್ಯ ನಾಟಕ
ದೇವ್ರು –
ಹಾಗಾದ್ರೆ, ನಿನ್ಗೆ ಕೊಟ್ಟಿರೋ ಈ ಎಕ್ಸ್ ಟ್ರಾ ಟಾಕ್ ಟೈಮ್ ಆಫರ್ ನ ಕ್ಯಾನ್ಸಲ್ ಮಾಡ್ಲಾ?
ಸೋಮ – ಸುಮ್ನಿರು
ದೇವ್ರೆ.. ಮೊದ್ಲೇ ಈ ದೇಶದಲ್ಲಿ ಹುಡುಗೀರ್ ಸಂಖ್ಯೆ ಕಡಿಮೆ.. ಹೆಂಗೋ ಜಂಪಿಂಗ್ ಜಪಾಂಗ್ ಜಂಪಿಂಗ್
ಜಪಾಂಗ್ ಅಂತ ೨೦ ೨೦ ಆಡ್ಕೊಂಡು ಲೈಫ್ ಕಳೀತೀವಿ..
ಸೋಮ – ರಂಗೂ..
ಬಿಸ್ ಬಿಸಿ ಮುದ್ದೆ ...ಕೋಳಿ ಸಾರು ತಗೊಂಡ್ ಹೊಲಕ್ ಬಾರಮ್ಮಿ.. ನಾನು ಹೊಲದ್ ತಾಗ್
ಹೋಗಿರ್ತೀನಿ..
ರಂಗೀಲ – ಆಯ್ತು
ರೀ,,.. ಮಾಡ್ಕೊಂಡ್ ಬರ್ತೀನಿ.. <ಸ್ವಲ್ಪ ಸಮಯದ ನಂತರ> ರೀ ರೀ ರೀ ಒಂದ್ ನಿಮಿಷ..
ಸೋಮ – ಏನೇ ಅದು?
ರಂಗೀಲ – ಕೋಳಿ
ಸಾರ್ ಮಾಡ್ಕೊಂಡ್ ಬರೋಕ್ ಹೇಳಿದ್ರಿ.. ನಮ್ ಮನೇಲಿ ಮೂರ್ ಕೋಳಿ ಇದೆ.. ಯಾವುದು ಮಾಡ್ಬೇಕು..
ಸೋಮ – ನಮ್ಮನೇಲ್ ಮೂರ್
ಇದ್ಯಾ?... ಒಂದ್ ಕೆಲಸ ಮಾಡು.. ಎದುರು ಮನೇವ್ರುದು ನಾಕ್ ಕೋಳಿ ಇದೆ.. ಅದನ್ನೇ ಒಂದ್
ಎತ್ತಾಕೊಂಡ್ ಬಂದ್ ಸಾರ್ ಮಾಡು -\
ರಂಗೀಲ- ರೀ ಅದು
ತಪ್ಪಲ್ವಾ?
ಸೋಮ – ಲೇ..
ಯಾವುದೇ ತಪ್ಪು..?? ತಪ್ಪು ಸರಿ ಯಾವುದು ಅಂತ ನಂಗೂ ಗೊತ್ತೈತೆ.. ಸಂವಿಧಾನದ ಪ್ರಕಾರ ಎದುರು
ಮನೆಯವರ ಕೋಳೀನ ನಾವು ತಿನ್ನಬಹುದು ಕಣೆ.. ನೈಟಾಗೆ ಇಸ್ಕೂಲ್ ಹೋಬಗ್ಬುಟ್ಟು ತಿಳ್ಕೊಂಡಿದೀನಿ
ನಾನು..
ರಂಗೀಲ – ಅಯ್ಯೋ
ಅಯ್ಯೋ ಅಯ್ಯೋ ನನ್ ಜಾಣ.. ಏಟ್ ಬುದ್ವಂತ ಆಗ್ಬುಟ್ಟೆ ನೀನು..
ಸೋಮ – ಹೂ ಕಣೆ..
ನಾನು ಬುದ್ವಂತ ಆಗಿವ್ನಿ.. ನೆನ್ನೆ ಇಸ್ಕೂಲ್ ನಾಗೆ ಸಂವಿಧಾನ ಪಾಟ ಮಾಡ್ತಿದ್ರು.. ಅದ್ಯಾವುದೋ
ಸಮಾನತೆ ಹಕ್ಕು ಅಂತ ಒಂದ್ ಐತಂತೆ.. ಎಲ್ಲಾ ಸಮಾನ ಇರಬೇಕಂತೆ ಕಣೆ ಈ ಭೂಮಿ ಮ್ಯಾಗೆ.. ಅದ್ಕೆ ನಮ್
ಮನೇಲಿ ಮೂರ್ ಕೋಳಿ ಐತೆ.. ಅವರ ಮನೇಲಿ ನಾಕ್ ಕೋಳಿ ಐತೆ.,. ಒಂದ್ ಎತ್ತಾಕೊಂಡ್ ಬಂದು ಸಾರ್
ಮಾಡು.. ಆಗ ಅವರ್ ಮನೇಲೂ ಮೂರ್ ಕೋಳಿ ಆಗುತ್ತೆ.. ನಮ್ ಮನೇಲೂ ಮೂರ್ ಕೋಳಿ ಆಗುತ್ತೆ.. ಯಾರಾದ್ರು
ಬಂದ್ ಕೇಳಿದ್ರೆ ಏಳು... ಸಂವಿಧಾನದಲ್ ಹೇಳೈತೆ ಸಮಾನತೆ ಇರಬೇಕು ಅಂತ ಅದಿಕ್ಕೆ ಹಿಂಗ್ ಮಾಡಿದ್ದು
ಅಂತ...... ರೂಲೀಸು ಮಾತಾಡ್ಬುಟ್ರೆ ಎಲ್ರೂ ಗಡ ಗಡ ಅಂದೋಯ್ತಾರೆ.. ಹೊಲದಲ್ಲಿ ಸೋಮ
ಬಿತ್ತನೇ ಮಾಡ್ತಿರ್ತಾನೆ.. <ನೇಗಿಲ ಯೋಗಿ ಹಾಡು>
ಚಕ್ರಪಾಣಿ –
ಏನಣ್ಣಾ ಇದು..?? ನಮ್ಮೂರಲ್ಲಿ ನೀರೇ ಇಲ್ವಲ್ಲಣ್ಣ.. ಹಿಂಗಾದ್ರೆ ಹೆಂಗಣ್ಣ ಬೆಳೆ ಬೆಳಿಯೋದು?
ಸೋಮ – ನೀರಿಲ್ಲ
ಅಂದ್ರೇನಾಯ್ತ್ ಲಾ..?? ಟೀವೀಲ್ ಬರೋ ಸೀರಿಲ್ ಗಳನ್ನ ನೋಡ್ಲಾ..
ಚಕ್ರಪಾಣಿ –
ಅಣ್ಣ.. ಹಳ್ಳೀನಾಗ್ ಕುಡಿಯೋಕ್ ನೀರಿಲ್ಲ ಅಂದ್ರೆ ಟಿವೀಲ್ ಬರೋ ಸೀರೀಯಲ್ ನೋಡು ಅಂತೀಯಲ್ಲಣ್ಣ..
ಹೊಟ್ಟೆಗ್ ಉಣ್ಣಕ್ ಸಿಗ್ತಾದಾ ಸೀರಿಯಲ್ ನೋಡಿದ್ರೆ?
ಸೋಮ – ಬಾರ್ಲಾ
ಇಲ್ಲಿ... ನೋಡು..... ಉದಯ ಟೀವೀಲಿ ಬಂಗಾರ.. ಈ ಟೀವೀಲಿ ....................... ಜೀ
ಟೀವೀಲಿ........ ಇಷ್ಟೆಲ್ಲಾ ಬೊಂಬಾಟ್ ಸೀರಿಯಲ್
ಗಳು ಬರ್ತಾವೆ.. ಫ್ಯಾಮಿಲಿ ಪೂರ್ತಿ ಅದನ್ ನೋಡ್ಕೊಂಡ್
ಕೂತ್ಕೊಂಡ್ರೆ ಸಾಕು.. ಮೂರ್ ಫಲ ಭತ್ತ ಬೆಳೀಬಹುದು.. ಅಷ್ಟು ನೀರು ಕಣ್ಣಲ್ಲೇ ಸಿಗ್ತದೆ
ಕಣ್ಲಾ..
ಚಕ್ರಪಾಣಿ-
ನಿಜಾನೇನಣ್ಣ?
ಸೋಮ - ಹೂ ನಲೇ....
ನೆಲದಿಂದ್ ನೀರ್ ತಗಿಯೋಕೆ ಬೋರ್ವೆಲ್ ಬೇಕು.. ಕಣ್ಣಿಂದ್ ನೀರು ತೆಗೀಬೇಕು ಅಂದ್ರೆ ಬರಗೆಟ್ಟ
ಊರುಗಳಿಗೆ ಇಂಥಾ ಸೀರಿಯಲ್ ಗಳು ಬೇಕು ಕಣ್ಲಾ.. ಬೇಕು.... ಅಷ್ಟು ಪವರ್ ಐತೆ ಈ ನಮ್ ಸೀರಿಯಲ್ಸ್
ನಲ್ಲಿ..
ಚಕ್ರಪಾಣಿ –
ಅಣ್ಣ.. ಈಗ್ ನಂಗ್ ಗೊತ್ತಾಯ್ತಣ್ಣ.... ಈಗ್ ನಂಗ್ ಎಲ್ಲಾ ಗೊತ್ತಾಯ್ತು..
ಸೋಮ – ಏನ್ಲಾ ಅದು
ಬುದ್ಧನಿಗೆ ಜ್ಞಾನೋದಯ ಆದಂಗೆ ನಿಂಗೂ ಜ್ಞಾನೋದಯ ಆಯ್ತೇನ್ಲಾ? ಏನೋ ಗೊತ್ತಾಗಿದ್ದು?
ಚಕ್ರಪಾಣಿ – ಉತ್ತರ
ಖಂಡದಲ್ಲಿ ಯಾಕ್ ಅಷ್ಟೋಂದ್ ಪ್ರವಾಹ ಬಂತು ಅಂತ..
ಸೋಮ – ಲೇ ಉತ್ತರ
ಖಂಡದಲ್ ಪ್ರವಾಹ ಆಗಿದ್ದಕ್ಕೂ ನಾನ್ ಹೇಳಿದ ಸೀರಿಯಲ್ ಕಥೆಗೂ ಏನ್ಲಾ ಸಂಬಂಧ..
ಚಕ್ರ – ಟೂರ್ ಗೆ
ಅಂತ ಬಂದೋರೆಲ್ಲಾ ರಾತ್ರಿ ಬಸ್ಸಲ್ಲಿ ಕೂತ್ಕೊಂಡು ಬಂಗಾರ ಧಾರಾವಾಹಿ ನೋಡ್ಬುಟ್ಟವ್ರೆ.. ಅದನ್
ನೋಡಿ ಎಲ್ರೂ ಗೊಳೋ ಅಂತ ಅಳೋಕ್ ಶುರು ಮಾಡ್ಬಿಟ್ಟವ್ರೆ.. ಕಣ್ಣೀರು ಉಕ್ಕಿ ಪ್ರವಾಹ ಆಗಿ
ಎಲ್ರನ್ನೂ ಕೊಚ್ಕೊಂಡು ಹೋಗೈತಣ್ಣ..
<ಚಕ್ರಪಾಣಿ
ತಾಯಿ> ರಾಧಾ –ಈಗ್
ಗೊತ್ತಾಯ್ತಾ ಮೂದೇವಿ.. ಹೆಣ್ಮಕ್ಳು ಕಣ್ಣೀರ್ ಹಾಕಿದ್ರೆ ಉತ್ತರಾ ನೂ ಕೊಚ್ಕೊಂಡೋಯ್ತದೆ..
ದಕ್ಷಿಣಾನೂ ಕೊಚ್ಕೊಂಡ್ ಹೋಯ್ತದೆ..
ಚಲ್ಲಣ್ಣ –
ಸೋಮಣ್ಣಾ.. ಕಾಲೇಜ್ ನಾಗ್ ಇಂಥಾ ಹುಡ್ಗೀರ್ ಒಸಿ ನಕ್ಬುಟ್ರೆ.. ಹುಡ್ಗರ್ ಲೈಫೂ ಕೊಚ್ಕೊಂಡ್
ಹೋಯ್ತದೆ..
ಚಲ್ಲಣ್ಣ – ಥೂ..
ಥೂ .. ಥೂ.. ನಾನು ಜೊಲ್ಲಣ್ಣ ಅಲ್ಲಮ್ಮ.. ಚಲ್ಲಣ್ಣ...
ರಾಧಾ – ಅಯ್ಯೋ
ಚಲ್ಲಣ್ಣ... ಮೊನ್ನೇವರೆಗೂ ನೆಟ್ಟಗೇ ಇದ್ದೆ.. ಆ ಯಡವಟ್ ಡಾಕ್ಟ್ರು ಇಂಜೆಕ್ಷನ್ ಕೊಟ್ಟ.. ಆವತ್ತಿಂದ
ಹಿಂಗಾಯ್ತು.. ಚಲ್ಲಣ್ಣ – ಯಾರ್
ರೀ ಅಂಥಾ ಕಿತ್ತೋದ್ ಡಾಕ್ಟ್ರು?
ರಾಧಾ – ಅವನಾ..?? ದೊಡ್ಡ
ಯಡವಟ್ಟು..
ಚಲ್ಲಣ್ಣ – ಅದೇ ರೀ
ಅವನ ಹೆಸರೇನು?
ಸೋಮ – ಅಯ್ಯೋ
ಚಲ್ಲಣ್ಣ.. ಆ ಡಾಕ್ಟ್ರು ಹೆಸರೇ ಡಾ. ಯಡವಟ್ಟು
ಚಲ್ಲಣ್ಣ- ಹಾ..??
ಅಂಥಾ ಹೆಸರು ಯಾರಾದ್ರೂ ಇಟ್ಕೋತಾರಾ?
ಚಕ್ರಪಾಣಿ-
ಅಯ್ಯೋ.. ಅದು ಅವನು ಇಟ್ಕೊಂಡಿರೋ ಹೆಸರಲ್ಲ.. ಜನ ಇಟ್ಟಿರೋ ಹೆಸರು.. ಅವನು ಯಾರಿಗ್
ಟ್ರೀಟ್ಮೆಂಟು ಕೊಟ್ರೂ.. ಕೊನೇಗೆ ಒಂದಲ್ಲಾ ಒಂದ್ ಯಡ್ವಟ್ಟು ಆಗೇ ಆಗುತ್ತೆ.. ಯಡ್ವಟ್ಟಾದ್ಮೇಲೆ
ಎಲ್ರೂ ಅವನನ್ನ ಯಡವಟ್ಟು ಯಡವಟ್ಟು ಅಂತ ಬೈದು ಬೈದು.. ಕೊನೇಗೆ ಅವನ ಹೆಸ್ರು ಡಾ. ಯಡವಟ್ಟು ಅಂತಾನೇ
ಆಗೋಯ್ತು..
ಚಲ್ಲಣ್ಣ- ಯಾವನ್ರೀ
ಅವನಿಗೆ ಡಾಕ್ಟರ್ ಕೆಲಸ ಕೊಟ್ಟಿದ್ದು?
ಸೋಮ- ಅಯ್ಯೋ..
ಅವನಿಗೆ ಯಾರ್ ಕೊಡ್ತಾರೆ ಡಾಕ್ಟರ್ ಕೆಲಸ.. ಐದ್ನೇ ಕ್ಲಾಸೇ ಐದ್ ಸಲ ಫೇಲಾಗವ್ನೆ..
ಚಲ್ಲಣ್ಣ- ಹಾ..??
ಐದ್ನೇಕ್ಲಾಸೇ ಫೇಲಾ..?? ಮತ್ತೆ ಅವನು ಡಾಕ್ರ್ ಹೆಂಗಾದ? ಟ್ರೀಟ್ಮೆಂಟ್ ಹೆಂಗ್ ಕೊಡ್ತಾವ್ನೆ?
ರಾಧಾ -
<ಕೋಪದಿಂದ ಏನೇನೋ ಬಡ ಬಡಾಯಿಸುತ್ತಾಳೆ.. ಅರ್ಥವಾಗದಂತೆ>
ಸೋಮ- ಹೇ ಮುದುಕಿ..
ಸುಮ್ಮನಿರು.. ಹಿಂಗಾ ಬಿಪಿ ರೇಜ್ ಮಾಡ್ಕೊಂಡ್ರ.. ಈಗ ನಾಲಿಗಿ ಸೆಟ್ಗೊಂಡಾದ... ಆಮ್ಯಾಗ ಹಾರ್ಟ
ಅಟ್ಯಾಕ್ ಆಗಿ ನೀನೇ ಸೆಟ್ಗೊಂಡ್ ಹೋಗ್ತಿ..
ರಾಧಾ -
<ದಂಗಾಗಿ ಸೈಲೆಂಟಾಗಿ ನಿಂತುಬಿಟುವಳು>
ಚಕ್ರಪಣಿ-
ಚಲ್ಲಣ್ಣ.. ಡಾ. ಯಡವಟ್ಟು ಗೌರ್ಮೆಂಟ್ ಆಸ್ಪತ್ರೇಲಿ ಕಸ ಗುಡ್ಸೋನು.. ನಮ್ಮೂರು ಗೌರ್ಮೆಂಟ್
ಡಾಕ್ಟರು ಬೆಳಿಗ್ಗೆ ಬರ್ತಾರೆ.. ಸೈನ್ ಹಾಕ್ಬುಟ್ಟು
ಮನೇಗ್ ಹೋಗಿ ಪಾಚ್ಕೊಂಬಿಡ್ತಾರೆ.. ಆಗ ಆಸ್ಪತ್ರೇಗ್ ಯಾರ‍್ ಬಂದ್ರೂ ಅಲ್ಲಿ ಯಾರೂ
ಸಿಗಕ್ಕಿಲ್ಲ.. ಆ ಕಸ ಗುಡ್ಸೋನ್ ಒಬ್ಬನ್ನ ಬಿಟ್ಟು.. ಅಲ್ಲೇ ಕಸ ಗುಡಿಸ್ತಾ ಗುಡಿಸ್ತಾ
ಅನಾಸಿನ್ನು ವಿಕ್ಸಾಕ್ಷನ್ನು ಅಂತ ಎರಡ್ ಮಾತ್ರೆ ಎಸ್ರು ತಿಳ್ಕೊಂಬಿಟ್ಟವ್ನೆ.. ಯಾರಾದ್ರೂ
ಹೆರಿಗೆ ಅಂತ ಬಂದ್ರೂ ಅದನ್ನೇ ಕೊಡ್ತಾನೆ.. ಇಸಾ ಕುಡಿದ್ ಸಾಯ್ತಿದ್ರೂ ಅದನ್ನೇ ಕೊಡ್ತಾನೆ..
ಒಂಥರ ಆ ಕಸ ಗುಡ್ಸೋನೇ ಈಗ ನಮ್ಮೂರಿಗೆ ಡಾಕ್ಟರ‍್ ಆಗ್ಬುಟ್ಟವ್ನೆ..
ಕಿಶೋರ –
ಏನ್ರಪ್ಪಾ...?? ಎಲ್ರೂ ಒಂದೇ ಕಡೆ ನಿಂತ್ಕೊಂಡು ಏನೋ ಮೀಟಿಂಗ್ ಮಾಡ್ದತಿದೀರಾ?
ಸೋಮ – ವಿಧಾನ್
ಸೌದ್ ದಾಗೆ ದೇಶದ ಬಗ್ಗೆ ಚಿಂತೆ ಮಾಡೋರು.. ದೇಶದ ಬಗ್ಗೆ ಮಾತಾಡೋರು ಇಲ್ವಂತೆ.. ಅದಕ್ಕೆ ಅವರು
ಮಾತಾಡೋದನ್ನ ನಾವಿಲ್ಲಿ ಮಾತಾಡ್ತಿದೀವಿ..
ಚಲ್ಲಣ್ಣ –
ಹೂನ್ರಪ್ಪಾ... ಇಲ್ಲಿ ಹಿಂಗ್ ಮೀಟಿಂಗ್ ಮಾಡೋರು.. ವಿಧಾನ್ ಸೌಧದ ಮೆಟ್ಲು ಹತ್ತುತಿದ್ದಂಗೆ
ಕಚ್ಚೆ ಪಂಚೆ ಹರ‍್ಕೊಂಡು ಫೈಟಿಂಗ್ ಮಾಡೋಕ್ ಶುರು ಮಾಡ್ತಾರೆ..
ಕಿಶೋರ – ಹೇ.. ಈ
ಸಾರಿ ಹಂಗೆಲ್ಲಾ ಆಗಲ್ರಪ್ಪಾ... ಕಚ್ಚೆ ಉಟ್ಟಿರೋ ಮೈಸೂರ‍್ ಗಂಡು ನಮ್ ಸಿದ್ರಾಮಯ್ನೋರ‍್ ಈಸಲ
ಸಿಎಂ ಆಗೋರೆ.. ಅಕ್ಕಿನೆಲ್ಲಾ ಒಂದ್ರೂಪಾಯಿಗೆ ಕೊಡ್ತಾವ್ರೆ..
ಮಾಲಾ – ಅಯ್ಯೋ
ಅಯ್ಯೋ ಮುಂಡೇವಾ... ಈ ಪುಟ್ಗೋಸಿ ರಾಜಕೀಯ
ಮಾತಾಡ್ಕೊಂಡು ಬಿತ್ತನೇ ಮಾಡೋದ್ ನಿಲ್ಸಿ ಓಸಿ ಓತ್ಲಾ ಒಡೀತೀದೀರೇನ್ಲಾ..??.. ಈ ರಾಜ್ಕೀಯದೋರ‍್
ಏನ್ ಮಾಡಿದ್ರೂ ನಮ್ ಬಾಳೇ ಉದ್ದಾರ ಆಗಕ್ಕಿಲ್ಲ ಕಣ್ಲಾ.. ಉದ್ದಾರ ಆಗಾಕಿಲ್ಲ..
ಬಿಕನಾಸಿ ಭೀಮ –
ಅಹಾ..
ಮಾಲಾ- ಹೂ.. ಬಂದಾ
ನೋಡು ಬಿಕ್ನಾಸಿ ಭೀಮ.. ಈ ರಾಜಕೀಯದಿಂದ ಹಾಳಾಗ್ ಹೋಗಿರೋದಕ್ಕೆ ಅವನೊಬ್ಬನೇ ದಂತ ಕಥೆ..
ರಾಧಾ –ನಡಿಯವ್ವಾ...
ನಡಿ.. ಮನೀಗ್ ಹೋಗೋಣು.. ಎತ್ತುಗಳಿಗೆ ಒಂದೀಟು ಹುಲ್ಲಾದ್ರೂ ಹಾಕೋಣ.. ಈ ಬಡ್ಡೇತಾವ್ಗಳ ಜೊತೆ
ಏನ್ ಮಾತು.. ನಡಿ ನಡಿ..
ಸೋಮ – ಓಹೋ...ಹೋ..
ಬರಬೇಕು ಬರಬೇಕು.. ಬಿಕನಾಸಿ ಭೀಮಣ್ಣೋರು.. ಹೆಂಗೈತೆ ಜೀವ್ನ
ಬಿಕನಾಸಿ ಭೀಮ –
ಕುಡಿಯೋಕೆ ಬೀರ‍್ ಇರಲು.. ಕೂರೋಕೆ ರಾಜಕೀಯದ ಚೇರ‍್ ಇರಲು.. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಆ
ಬೀರಣ್ಣ.. ಆ ಹಾ.. ನಮ್ಮಣ್ಣ.. ಸಿಯಮ್ಮಣ್ಣನಿಗೆ ಜೈ..
ಕಿಶೋರ – ಅಲೇ
ಇವನಾ.. ಸಿಯಮಣ್ಣ ಒಳ್ಳೆ ಕೆಲಸ ಮಾಡ್ತಾವ್ರೆ ಅಂತ
ಗೊತ್ತು.. ಆದ್ರೆ ಈ ಕುಡುಕ್ ನನ್ ಮಕ್ಕಳಿಗೆ ಏನ್ ಒಳ್ಳೇದಾಗೈತೆ..? ಮತ್ತೆ ಕಳ್ ಭಟ್ಟಿ ಏನಾದ್ರೂ
ಓಪನ್ ಆಯ್ತಾ?
ಬಿಕನಾಸಿ ಭೀಮ –
ಹಲೋ... ಲೋಕಲ್ ಕುಡಿಯೋಕೆ ನಾವೇನು ಲೋಫರ‍್ ಗಳಾ..? ಬ್ರಾಂಡೆಡ್ ಅಮ್ಮಾ.. ಇದು ಪ್ಯೂರ‍್ ವಿಜಯ್
ಮಲ್ಯನ ಮಾಲು..
ಕಿಶೋರ – ಅಲ್ರೀ
ಬಿಕನಾಸಿ ಭೀಮಣ್ಣ.. ಹಿಂಗ್ ಕುಡೀತಿದ್ರ ಜೀವ್ನ ಹೆಂಗ್ ನಡೀತೈತ್ರಿ?
ಬಿಕನಾಸಿ ಭೀಮ – ಈ
ಬಾರಲ್ಲಿ ಒಂದ್ ಹೊಸ ಸಿಸ್ಟಮ್ ಮಾಡ್ಬಿಟ್ಟವ್ರೆ.. ನೂರ‍್ ರೂಪಾಯಿಗೆ ನಾವು ಕುಡಿದು ಬಿಟ್ರೆ ಒಂದ್
ರೂಪಾಯಿ ಅವರು ನಮಗೆ ಟಿಪ್ಸ್ ಕೊಡ್ತಾರೆ..
ಸೋಮ – ಅಲ್ಲ.. ಈ
ಟಿಪ್ಸು ಗಿಪ್ಸು ಅದೆಲ್ಲಾ ನಾವೇ ಕೊಡ್ಬೇಕಲ್ಲೇನೋ... ಅವರು ಯಾಕ್ ನಮಗ್ ಕೊಡ್ತಾರ?
ಬಿಕನಾಸಿ ಭೀಮ –
ಹೊಸ ಗೌರ್ಮೆಂಟು ಹೊಸ ರೂಲೀಸ್ ಮಾಡೈತೆ.. ಯಾರ‍್ ಯಾರು ನೂರು ರೂಪಾಯಿಗೆ ಫುಲ್ ಕುಡೀತಾರೋ ಅವರಿಗೆ
ಒಂದ್ ರೂಪಾಯಿ ಟಿಪ್ಸ್ ಕೊಡ್ಬೇಕಂತ.. ಅದಕಾ.. ನಾನು ನೂರ‍್ ರೂಪಾಯಿಗೆ ದುಡೀತೀನಿ.. ನೂರ‍್
ರೂಪಾಯಿ ಪೂರ‍್ತಿ ಕುಡಿದು ಮನೀಗ್ ಬರುವಾಗ ಒಂದ್ ರೂಪಾಯಿ ಟಿಪ್ಸ್ ತಗೊಂಡು ಬರ‍್ತೀನಿ..
ಚಕ್ರಪಾಣಿ – ಅಲ್ಲ
ಪಾ ಬಿಕನಾಸಿ ಅಣ್ಣ.. ನೀನು ಹಿಂಗ ದುಡಿದಿದ್ದೆಲ್ಲಾ ಕುಡಿದ್ರಾ ಹೆಂಡ್ರು ಮಕ್ಳು ಹಣೇಬರ ಹೆಂಗ?
ಭೀಮ – ಹೇ..
ಅದ್ರಲ್ಲೆಲ್ಲಾ ನಾನ್ ಪಕ್ಕಾ ಲೇ ತಮ್ಮ.. ಆ ಬಾರ‍್ ಮಾಲೀಕ ಒಂದ್ ರೂಪಾಯಿ ಟಿಪ್ಸ್ ಕೊಡ್ತಾನಲ್ಲ..
ಅದನ್ನ ಸೀದಾ ತಂದು ನನ್ ಹೆಂಡ್ತೀಗ್ ಕೊಡ್ತೀನಿ..
ಚಲ್ಲಣ್ಣ – ನಿನ್
ಹೆಂಡ್ತೀಗ್ ಯಾಕ?
ಭೀಮ – ಏನ್
ಹುಚ್ಚಿದೀಯೋ ನೀನು? ಗೌರ್ಮೆಂಟ್ ರೂಲೀಸ್ ಗೊತ್ತಿಲ್ಲೇನ? ನಮ್ಮ ಈ ಹೊಸ ಸೀಯಮ್ಮಣ್ಣ ಬಂದ್ಮೇಲೆ
ನಮ್ಮಂಥ ಸಾರಾಯಿ ಸರದಾರರಿಗೆ ಸಖತ್ ಒಳ್ಳೇದಾಗೈತೆ.. ಒಂದ್ರೂಪಾಯಿಗೆ ಒಂದ್ ಕಿಲೋ ಅಕ್ಕಿ
ಮಾಡ್ಯಾರ.. ಮೊದ್ಲು ನೂರ‍್ ರೂಪಾಯಿ ದುಡ್ಕೊಂಡು ಬಂದು ಎಪ್ಪತ್ ರೂಪಾಯಿಗೆ ಕುಡೀತಿದ್ದೆ.. ಮೂವತ್
ರೂಪಾಯಿಗೆ ಅಕ್ಕಿ ತರೋಕೆ ಹೇಳ್ತಿದೆ.. ಆದ್ರೆ ಈಗ್ ನೋಡಿದ್ರೆ 99 ರೂಪಾಯಿಗೆ ಕಂಠ
ಪೂರ‍್ತಿ ಕುಡೀಬಹುದು.. ಆಹಾ.. ಹೊಸ ಸಿಯಮ್ಮಣ್ಣಂಗೆ ಜೈ.. ದಾರಿ ಬಿಡ್ರಪ್ಪಾ.. ನಾನ್ ಮನೇಗ್
ಹೋಗ್ಬೇಕು.. ನನ್ನೆಂಡ್ರು ಕಾಯ್ತಿರ‍್ತಾಳೆ..
ಚಕ್ರಪಾಣಿ –
ಒಟ್ನಲ್ಲಿ ನಮ್ ಜನರನ್ನ ಉದ್ದಾರ ಮಾಡೋದಕ್ಕೆ ಯಾರಿಂದಾನೂ ಆಗಲ್ಲ ಬಿಡಿ.. ಯಥಾ ರಾಜ.. ತಥಾ
ಪ್ರಜಾ.. ಬಡವರಿಗೆ ಒಳ್ಳೇದಾಗ್ಲಿ ಅಂತ ಕೆಜಿ ಗೆ ಒಂದ್ರೂಪಾಯಿ ಅಕ್ಕಿ ಕೊಡ್ತಾವ್ರೆ,.. ಇವರು
ನೋಡಿದ್ರೆ ದುಡಿದಿದ್ದೆಲ್ಲಾ ಎಣ್ಣೇ ಅಂಗಡೀಗ್ ಸುರೀತಾವ್ನೆ.. ಛೆ..
MLA ಪಾಂಡು – ತಗೊಳ್ಳಿ ಐನೂರ‍್ ರೂಪಾಯಿ ನೋಟು.. ಹಾಕಿ ನಿಮ್ಮದು ನಿಮ್ಮ
ಮನೆಯವರದ್ದು ಓಟು..
ಚಲ್ಲಣ್ಣ – ರೈತಾನೇ
ದೇಶದ ಬೆನ್ನೆಲುಬು ಸ್ವಾಮಿ.. ಅವನಿಗೆ ಹಿಂಗೆ ಕುಡಿತ ನೋಟು ಅಂತ ಆಸೆ ತೋರಿಸಿ ಓಟ್
ಗಿಟ್ಟಿಸ್ಕೋಬೇಡಿ.. ಎಲ್ರೂ ಕುಡುಕ್ರಾಗಿ ಬಿದ್ದೋದ್ರೆ ಬೆನ್ನೆಲುಬು ಹೆಂಗ್ ಸ್ವಾಮಿ ಇರ‍್ತದೆ..
ಸೋಮ – ಏನ್
ಸ್ವಾಮಿ... ಗೆಲ್ಲೋವರೆಗೂ ರೈತಾನೇ ಬೆನ್ನೆಲುಬು.. ಅಂತ ಉಬ್ಬಿಸ್ತೀರ.. ಗೆದ್ದ ಮೇಲೆ ಆ
ಬೆನ್ನೆಲುಬನ್ನ ಮುರೀತೀರ.. ಗೊಬ್ರ ಕೇಳಿದ್ರೆ ಗೋಲಿಬಾರ‍್ ಮಾಡಿಸ್ತೀರ.. ಕಾವೇರಿ ನೀರ‍್ ನ
ಬೇರೇಯವರಿಗ್ ಕೊಡ್ತೀರ..ಗೆದ್ರೇ ರೈತನ ಸಾಲ ಮನ್ನ ಮಾಡ್ತೀವಿ ಅಂತೀರ.. ಗೆದ್ಮೇಲೆ ನೈಂಟಿ ಕುಡಿ
ಪಲ್ಟಿ ಹೊಡಿ ಅಂತ ಇಧಾನ್ ಸೌದ್ ದಾಗೇನೇ ನಾಯಿ ನರಿಗಳ್ ಥರ ಕಿತ್ತಾಡ್ತಿರ‍್ತೀರ.. ನಮ್ಮಂಥ
ಬಡವರಿಗೆ ಏನ್ ಸ್ವಾಮಿ ಆಗ್ತೈತೆ ನಿಮ್ಮಂಥವರಿಂದ?
MLA (PA) – ಬೆನ್ನೆಲುಬು ಮುರಿದ್ರೆ ಡಾಕ್ಟರ‍್ ಹತ್ರ ಹೋಗ್ರಯ್ಯಾ.. ನಮ್
ಸಾಯೇಬ್ರು ಎನ್ ಮಾಡಾಗ್ತೈತೆ..?? ನಮ್ ಸಾಯೇಬ್ರೇನು ಡಾಕ್ಟರಾ ಓದವ್ರೆ? ಐದ್ನೇ ಕ್ಲಾಸಲ್ಲಿ
ಲಾಸಾಆ ಕಂಡು ಹಿಡಿಯಿರಿ ಅಂತ ಅವರ ಲೆಕ್ಕದ ಮೇಷ್ಟ್ರು ಹೇಳಿದ್ದಕ್ಕೆ ಆವತ್ತು ಸ್ಕೂಲಿಂದ ಓಡಿ
ಹೊರಗೆ ಬಂದೋರು ಈವತ್ತಿನ ವರೆಗೂ ಸ್ಕೂಲ್ ಕಡೆ ತಿರುಗಿ ನೋಡಿಲ್ಲ.. ಆವತ್ತಿಂದ ಲಸಾಆ ಕಂಡು
ಹಿಡೀತಾವ್ರೆ,.. ಅದು ಇನ್ನು ಸಿಗ್ತಿಲ್ಲ.. ಹಿಂಗಿರುವಾಗ ನಿಮ್ಮ ಬೆನ್ನೆಲುಬಿಗೆ ಅದೇನ್ ತ್ಯಾಪೆ
ಹಾಕೋಕಾಗುತ್ತೆ...?
ಪಾಂಡು – ನೋಡಿ
ಅಣ್ಣ ತಮ್ಮಂದ್ರ.... ಹೋದ್ಸಲ ನಿಮಗೆ ಏನೇನೋ ಮಾಡ್ತೀನಿ ಅಂತ ಆಸ್ವಾಸನೆ ಕೊಟ್ಟಿದ್ದೆ.. ಆದ್ರೆ ಅದ್ಯಾವುದೂ
ಈಡೇರಿಲ್ಲ ಅಂತ ನಂಗೊತ್ತು.. ಏನ್ ಮಾಡೋದು
ಪರಿಸ್ಥಿತಿ..
ಚಕ್ರಪಾಣಿ – ಏನ್
ಸಾಯೇಬ್ರೇ.. ದಿಲ್ಲಿನಾಗೂ ನಿಮ್ದೇ ಸರ್ಕಾರ.. ಇಲ್ಲೂ ನಿಮ್ದೇ ಸರ್ಕಾರ.. ಇನ್ನೇನ್ ಪರಿಸ್ಥಿತಿ..
ಕೊಟ್ಟ ಮಾತನ್ನ ಉಳಿಸ್ಕೋಬೇಕಿತ್ತು ತಾನೆ?
MLA (PA) – ಇದೇನಣ್ಣ... ಜನ್ಗಳು ನಿಮ್ಗಿಂತ ಬುದ್ವಂತ್ರಾಗೋರೆ..?? ದಿಲ್ಲೀವರೆಗೂ
ತಿಳ್ಕೊಂಡ್ ಬಿಟ್ಟವ್ರೇ..?? ಏನ್ ಹೇಳ್ತೀರ ಸಮಾಧಾನ ಹೇಳಿ...
ಪಾಂಡು - ಹಾ.. ಇರಲಿ ಇರಲಿ... ಮಾಡ್ತೀನಿ..
ಪಾಂಡು – ನೋಡಿ ಅಣ್ಣ ತಮ್ಮಂದ್ರ.. ದಿಲ್ಲೀನಾಗೂ ನಮ್ದೇ ಸರ್ಕಾರ ಇತ್ತು.. ಇಲ್ಲೂ ನಮ್ದೇ ಸರ್ಕಾರ ಇತ್ತು.. ಆದ್ರೂ ಹೆಳಿದ್ ಕೆಲಸ
ಮಾಡಿ ಕೊಡೋಕೆ ಆಗಿಲ್ಲ.. ಯಾಕಂದ್ರೆ.. ಈ ಆಪೋಸಿಷನ್ ಪಾರ್ಟಿನಲ್ ಕೂತ್ಕೋತಾರಲ್ಲ.. ಅವ್ರು
ಕೊಳ್ಳೇಗಾಲಕ್ ಹೋಗ್ಬುಟ್ಟು ಮರ‍್ತೋಗೋ ಥರ ಮಾಟ ಮಾಡಿಸ್ಬಿಟ್ಟಿದ್ರು.. ನಾನು ಏನೇ ಒಳ್ಳೇ ಕೆಲಸ
ಮಾಡ್ಬೇಕು ಅಂತ ಅನ್ಕೊಂಡ್ರೂ ಅದು ಮರ‍್ತೋಗ್ತಿತ್ತು.. ಅದಿಕ್ಕೆ ನಿಮ್ಮೂರಿಗೆ ಮಾಡ್ಬೇಕಾಗಿದ್ದ
ಒಳ್ಳೇ ಕೆಲಸ ಯಾವುದು ಮಾಡೋಕ್ ಅಗಿಲ್ಲ.. ಇದ್ರಲ್ಲಿ ನಂದೇನೂ ತಪ್ಪಿಲ್ಲ.. ನಂಗೂ ನಿಮ್ಗೂ ಜಗಳ
ತಂದಿಡ್ಬೇಕು ಅಂತ ಆಪೋಸಿಷನ್ ಪಾರ್ಟಿನೋರು ಹಿಂಗ್ ಮಾಡವ್ರೆ..
MLA
(PA) – ನೀವೇನೂ ಚಿಂತೆ ಮಾಡ್ಬೇಡಿ.. ನಮ್ ಸಾಯೇಬ್ರು
ಈಗ್ ತಾನೆ ಕೊಳ್ಳೇಗಾಲಕ್ ಹೋಗಿ ಕುಂಬಳ ಕಾಯಿ ಮಂತ್ರಿಸಿಕೊಂಡು ಕಾಡ್ ಪಾಪಾ ನ ಬಲಿ ಕೊಟ್ಟು
ಬಂದವ್ರೆ.. ಅವರ ಮರ‍್ತೋಗೋ ಖಾಯಿಲೆ ಈವತ್ತಿಂದ ದೂರ ಆಗೈತೆ.. ಈಸಲ ನೀವ್ ಓಟಿ ಹಾಕಿ.. ನಿಮ್
ಕೆಲಸ ಮಾಡಿ ಕೊಡ್ತಾರೆ.. ಎಲ್ಲಾ ಒಳ್ಳೆದಾಗುತ್ತೆ ಈ ಸಲ ಓಟ್ ಹಾಕಿ..
ಪಾಂಡು –
ಹೂನ್ರಪ್ಪೋ.. ನಾನಿನ್ನು ಭಾಳ ಒಳ್ಳೇ ಕೆಲಸ ಮಾಡೋದೈತೆ.. ದಯವಿಟ್ಟು ಓಟ್ ಹಾಕ್ಬಿಡಿ..
MLA (PA) - ಕಿತ್ತೋದ್ ನನ್ ಮಗ.. ಬೇವರೆಸಿ ನನ್ ಮಗ.. ಅಂತ ಬೈಕೊಂಡ್ರು ನಮ್
ಸಾಯೇಬ್ರಿಗೆ ಬೇಜಾರಿಲ್ಲ.. ಬೈಕೊಂಡಾದ್ರೂ ಓಟ್ ಹಾಕಿ.. ಒಟ್ನಲ್ಲಿ ನಮ್ ಸಾಯೇಬ್ರಿಗೆ ನಿಮ್ ಓಟ್
ಬೇಕು ಅಷ್ಟೆ..
ಸೋಮ – ಇಲ್ಲೇ ಇದೀನ
ರಂಗು.. ಬಂದೆ.... ಬಾ ಚಲ್ಲಣ್ಣ... ಬಾ ಚಕ್ರಪಾಣಿ.. ನಿಮ್ಮಕ್ಕ ಕೋಳಿ ಸಾರು ಮುದ್ದೆ ಮಾಡ್ಕೊಂಡ್
ಬಂದೈತೆ.. ಹೋಗಿ ಊಟ ಮಾಡುವ..<ಎಂದು ಎಲ್ಲರೂ
ಊಟಕ್ಕೆ ಕೂರ‍್ತಾರೆ..>
ಚಕ್ರಪಾಣಿ – ವಾ..
ಅಕ್ಕಯ್ಯಾ.. ಊಟ ಸಕ್ಕತ್ತಾಗೈತೆ.. ನೀನ್ ಮಾಡೋ ಕೋಳಿ ಸಾರು.... ರಾಗಿ ಮುದ್ದೆ.. ಅಬ್ಬಾ.. ನಿಜ್ವಾಗ್ಲೂ ರಸ ಗವಳ ಅಕ್ಕ..
ಸೋಮ- ಚಕ್ರ.. ಈ
ಮುದ್ದೆ ಐತಲ್ಲಾ.. ಈ ಮುದ್ದೆ... ಇದು ನಮ್ ಹೊಲ್ದಾಗೆ ಬೆಳ್ದಿರೋ ರಾಗಿಯಿಂದ ಮಾಡಿದ್ದು ಕಣ್ಲಾ..
ಹೆಂಗೈತೆ..<ಎಂದೊಡನೇ
ಎಲ್ಲರೂ ರಕ್ತ ವಾಂತಿ ಮಾಡಿಕೊಳ್ಳುತ್ತಾರೆ>ಅವರ ಕಿರುಚಾಟವನ್ನು
ನೋಡಿ ಜನರು ಬಂದು ಅವರನ್ನು ಆಸ್ಪತ್ರೆಗೆ ಸೇರಿಸ್ತಾರೆ.. ಸೋಮನಿಗೆ ಹೆಚ್ಚಿನ ಅಪಾಯ ಆಗಿರೋದಿಲ್ಲ..
ಡಾ. ಯಡವಟ್ಟು –
ಸೋಮಣ್ಣ.. ಸೋಮಣ್ಣ.. ಹೆಂಗೋ ದೇವ್ರುದೊಡ್ಡೋನು.. ನಿಮಗಾ ಏನೂ ಆಗಿಲ್ಲ.. ಜೀವ ಉಳುದೈತೆ.. ಅದಕ್
ಖುಷಿ ಪಡ್ರಿ..
ಸೋಮ– ಏನ್ ಪಾ
ಡಾಕ್ಟರು.. ನಮಗ ಯಾಕ್ ಹಿಂಗಾತು..??
ಡಾ. ಯಡವಟ್ಟು –
ನೀವು ಊಟ ಮಾಡಿದ್ರಲ್ಲ.. ಅದು ವಿಷ ಸೋಮಣ್ಣ..
ಸೋಮ – ನಾವು
ತಿಂದುದ್ದು ರಾಗಿ ಮುದ್ದೆ.. ಕೋಳಿ ಸಾರು.. ಅದ್ರಾಗ್ ಹೆಂಗ್ ವಿಷ ಇತ್ತು?
ಡಾ. ಯಡವಟ್ಟು –
ನೋಡ್ ಸೋಮಣ್ಣ.. ನೀವ್ ತಿಂದಿದ್ದ ರಾಗಿ ಒಳಗ ವಿಷ ಐತಿ.. ನೀವು ಬಿತ್ತನೆ ಮಾಡಿದ ರಾಗಿ ಬೀಜದಾಗ
ವಿಷ ಇತ್ತಂದ್ರ ಅದು ಹಂಗಾ ಬೆಳಿಯೊಳಗ ಸೇರಿ ಎಲ್ಲಾ ಬೀಜದಾಗ ಬಂದು ಬಿಡ್ತೈತೆ.. ಅದ್ರಿಂದಾ ನಿಮಗ್
ಹಿಂಗಾಗೈತಿ.. ನೀವು ಮೂವರು ಬದುಕಿದ್ರಿ.. ಆದ್ರ ನಿಮ್ ಹೆಂಡ್ತಿ ರಂಗೀಲಾಗ ಭಾಳ ಸೀರಿಯಸ್
ಆಗೈತಿ.. ಆಕಿಗಿ ಆಪರೇಷನ್ ಮಾಡ್ಬೇಕು.. ನೀವು ರೆಸ್ಟ್ ಮಾಡ್ರಿ.. ನಾನು ಆಪರೇಷನ್ ಮಾಡಿ ಬರ‍್ತೀನಿ.
ಸೋಮ – ದೇವ್ರೇ..
ಸರ್ಕಾರ ನಮಗೆ ನೇರವಾಗಿ ಸಾಯಿಸೋಕೆ ಆಗದೇ ವಿಷದ ಬೀಜ ಕೊಟ್ಟು ನಮ್ ಬದುಕಿಗೆ ವಿಷ ಹಾಕಿತು.. ನನ್
ಹೆಂಡ್ತಿ ಸೀರಿಯಸ್ ಆಗಿದಾಳೆ.. ನನಗೇನೂ ಬ ಏಡ ಈ ಜಗತ್ತಿನಲ್ಲಿ.. ಆಕಿನಾದ್ರೂ ಉಳಿಸಿ ಕೊಡು ದೇವ್ರೆ,.. ನನಗೆ ಅದೇ ಸಾಕು..
ದೇವ್ರು – ಮಗನೇ..
ನೀನು ಆವತ್ತು ಏನಂದೆ..?? ನನಗೆ ಈ ಎಕ್ಸ್ ಟ್ರಾ ಟಾಕ್ ಟೈಮ್ ಬೇಡ ದೇವ್ರೆ... 50 ಕೆಜಿ ಸಾಕು.. ಈ ಎಕ್ಸ್
ಟ್ರಾ 50 ಕೆಜಿ ಯಾಕ್
ಕೊಟ್ಟೆ.. ಅಂದಲ್ಲ.. ಅದಕ್ಕೆ ಆ ಎಕ್ಸ್ ಟ್ರಾ ಕೆಜಿ ನಾ ನಾನು ಈವತ್ತು ವಾಪಸ್ ತಗೊಳ್ತಿದೀನಿ.. ಹೋಗು..
ನಿನ್ನ ಪಾಡಿಗೆ ನೀನು ಜೀವನ ನಡೆಸು..
ಸೋಮ – ದೇವ್ರೆ..
ಜೊತೇಲಿ ಇರೋ ತನಕ ಅವರ ಬೆಲೆ ಗೊತ್ತಾಗಕ್ಕಿಲ್ಲ ಅಂತೆ.. ನನಗೂ ಹಂಗೆ ಆಗಿದ್ದು.. ನನ್ ಹೆಂಡ್ತಿ
ಹೆಂಗಾದ್ರೂ ಇರಲಿ.. ಆದ್ರೆ ಅವಳಷ್ಟು ಪ್ರೀತಿನ ನಂಗೆ ಯಾರೂ ತೋರಿಸಿಲ್ಲ ದೇವ್ರು.. ಆ ಪ್ರೀತೀನ
ನನ್ನಿಂದ ದೂರ ಮಾಡ್ಬೇಡ.. ಅಂದ.. ಚೆಂದ.. ಇದೆಲ್ಲದಕ್ಕಿಂತ ಪ್ರೀತಿ ಮುಖ್ಯ.. ಅನ್ನೋದು ನಂಗ್ ಗೊತ್ತಾಗಿದೆ.. ಎಕ್ಸ್ ಟ್ರಾ ಟಾಕ್
ಟೈಮ್ ಜೊತೆಗೆ ಅವಳ ಎಕ್ಸ್ ಟ್ರಾ ಪ್ರೀತಿ ಕೂಡ ನಂಗ್ ಬೇಕು.. ಅವಳನ್ನ ಉಳಿಸಿಕೊಡು ದೇವ್ರು..
ಉಳಿಸಿಕೊಡು..
ದೇವ್ರು – ತಥಾಸ್ತು
ಡಾ. ಯಡವಟ್ಟು –
ಸಕ್ಸಸ್... ಸಕ್ಸಸ್.. ನನ್ನ ಮೊದಲನೇ ಆಪರೇಷನ್ ಸಕ್ಸಸ್ ಆಗ್ಬಿಟ್ತು.. ಸೋಮಣ್ಣ.. ನಿನ್ನೆಂಡ್ರು
ಬದುಕಿಬಿಟ್ಳು..
ಸೋಮ – (ರಂಗೀಲಳನ್ನು ನೋಡಿ ಡಾಕ್ಟರ‍್ ಗೆ ಹೇಳ್ತಾನೆ) ಇದೇನ್ ಡಾಕ್ಟ್ರೇ.. ನನ್ನೆಂಡ್ರು 50 + 50 ಡಬಲ್ ಟಾಕ್ ಟೈಮ್
ಥರ ಇದ್ದೋಳು ಈಗ್ ನೋಡಿದ್ರೆ ಇಟೋಂದ್ ಸಣ್ಣಗೆ ಆಗೋಗಿದಾಳೆ..??
Tags
ಹಾಸ್ಯ ವಿಷಯಗಳು
TV9 Kannada Live
News18 Kannada Live
Suvarna News Live
ಇತ್ತೀಚೆಗೆ ಹುಡುಕಿದ್ದು
-
ಫೆಬ್ರವರಿ 20 ಕ್ಕೆ ರಷ್ಯಾ-ಉಕ್ರೇನ್ ಯುದ್ಧ.. ಏಲಿಯನ್ಸ್ ದಾಳಿ ಸಾಧ್ಯತೆ..? ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ...
-
ಟ್ರಕ್ ಚಾಲಕರಿಗೆ ಶಾಕ್. 1 ವರ್ಷ ಜೈಲು.. 60 ಲಕ್ಷ ರೂಪಾಯಿ ದಂಡ.. Trucker-protests-in-Canada-due-to-covid-19-vaccine-mandates-and-Ontario-call...
-
ಆಂಧ್ರದ ಅಮರಾವತಿಯಲ್ಲಿ ಆಕಾಶ ಕಪ್ಪಾಗುತ್ತಿರುವುದೇಕೆ ? ಇದನ್ನು ನೋಡಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಶಾಕ್ ಕರ್ನಾಟಕದ ನೆರೆ ರಾಜ್ಯವಾ...
-
ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಈಸಲಾನೂ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕ...
-
ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 4 ವರ್ಷಗಳಲ್ಲಿ ಮೋದಿ ಅಚ್ಚೇದ...
-
ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭ...
-
2018ರ ಕರ್ನಾಟಕದ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೆತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿತ್ತು. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆದ್ದ ಉದ...
-
Moonfall ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್..! Moonfall ಎಂದರೆ ಚಂದ್ರ ಕೆಳಗೆ ಬಿದ್ದ ಎಂದರ್ಥ. ಚಂದ್ರನ ಬಗ್ಗೆ ಜಗತ್ತಿನಾದ್...
-
ನಡುರಸ್ತೆಯಲ್ಲೇ ನಡೀತು ಭೀಕರ ಘಟನೆ. ಮೊಬೈಲ್ ನಲ್ಲಿ ಎದೆ ನಡುಗಿಸುವ ದೃಶ್ಯ ಕಪ್ಪು ಬಣ್ಣದ ಉಡುಪು ಧರಿಸಿದ ವ್ಯಕ್ತಿಯೊಬ್ಬ 10 ಇಂಚು ಡ್ರ್ಯಾಗರ್ ಹಿಡಿದು ಕಾ...
.jpg)

